ಮಿಸ್ ಆಗಿದ್ದ ರೈಲನ್ನು ಚೇಸ್ ಮಾಡಿದ ಆಟೋ ಚಾಲಕ; ಸಿನಿಮಾ ಕಥೆ ಮೀರಿಸುತ್ತೆ ಘಟನೆ
ಬೆಂಗಳೂರು; ಬೆಂಗಳೂರು ಟ್ರಾಫಿಕ್ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ರಸ್ತೆ ಮಾರ್ಗವಾಗಿ ಹೊರಟರೆ ಅಂದುಕೊಂಡಿದ್ದ ಜಾಗಕ್ಕೆ ಅಂದುಕೊಂಡ ಸಮಯದಕ್ಕೆ ತಲುಪೋದಕ್ಕೆ ಆಗೋದೇ ಇಲ್ಲ. ಒಮ್ಮೊಮ್ಮೆ ಅಚಾಕನ್ನಾಗಿ ಹೆಚ್ಚು ಟ್ರಾಫಿಕ್ ಜಾಮ್ ಆಗಿಬಿಡುತ್ತೆ. ಆಗಂತೂ ರೈಲು, ಬಸ್ಸು ಹಿಡಿಯಬೇಕಿದ್ದವರು, ಅವುಗಳನ್ನು ಮಿಸ್ ಮಾಡಿಕೊಳ್ಳುತ್ತಾರೆ. ರೈಲು ನಿಲ್ದಾಣ ಸೇರೋ ವೇಳೆ ರೈಲು ಹೊರಟುಹೋಗಿರುತ್ತದೆ. ಇಂತಹ ಘಟನೆಗಳು ಮಾಮೂಲಿ. ಅದೇ ರೀತಿ ಇಲ್ಲಿ ಇಬ್ಬರು ವ್ಯಕ್ತಿಗಳಿಗೆ ರೈಲಿ ಮಿಸ್ ಆಗಿತ್ತು. ಆದ್ರೆ ಆಟೋ ಚಾಲಕನೊಬ್ಬ ರೈಲನ್ನೇ ಚೇಸ್ ಮಾಡಿ ಮತ್ತೊಂದು ರೈಲು ನಿಲ್ದಾಣದಲ್ಲಿ ಇಬ್ಬರು ಪ್ರಯಾಣಿಕರನ್ನು ರೈಲಿಗೆ ಹತ್ತಿಸಿ ಸಾಹಸ ಮೆರೆದಿದ್ದಾನೆ.
ಆದಿಲ್ ಹುಸೇನ್ ಎಂಬುವವರು ಈ ಸಾಹಸಗಾಥೆಯನ್ನು ತಮ್ಮ ಟ್ವಿಟರ್ ಅಕೌಂಟ್‌ನಲ್ಲಿ ಬರೆದುಕೊಂಡಿದ್ದಾರೆ. ಆದಿಲ್ ಹಾಗೂ ಆತನ ಸ್ನೇಹಿತ ಮೆಜೆಸ್ಟಿಕ್‌ನಿಂದ ರೈಲು ಹತ್ತಬೇಕಿತ್ತು. ಆದ್ರೆ ಅವರು ಬರುವ ವೇಳೆಗೆ ರೈಲು ಅಲ್ಲಿಂದ ಹೊರಟಿತ್ತು. ಆಗ ಆದಿಲ್ ಹುಸೇನ್ ಆಗ ಆತನ ಸ್ಮೇಹಿತ ಆಟೋ ಡ್ರೈವರ್ ಒಬ್ಬರ ಬಳಿ ಏನು ಮಾಡೋದು ಎಂದು ಕೇಳಿದ್ದಾರೆ. ಆಗ ಆಟೋ ಡ್ರೈವರ್ ಮುಂದಿನ ರೈಲ್ವೇ ಸ್ಟೇಷನ್ ಯಲಹಂಕ ಜಂಕ್ಷನ್ 17 ಕಿಲೋ ಮೀಟರ್ ದೂರದಲ್ಲಿದೆ. ರೈಲು ಅಲ್ಲಿಗೆ ಬರೋದಕ್ಕೆ 20-25 ನಿಮಿಷ ಬೇಕಾಗಬಹುದು. ಅಷ್ಟೊತ್ತಲ್ಲ ನಾನು ನಿಮ್ಮನ್ನು ಅಲ್ಲಿ ತಲುಪಿಸುತ್ತೇನೆ ಎಂದು ಹೇಳಿದ್ದಾನೆ. ಅವರು ನಂಬದಿದ್ದರೂ, ಅನುಮಾನದಿಂದಲೇ ಆಟೋ ಏರಿದ್ದಾರೆ.
ಆಟೋ ಡ್ರೈವರ್ ಟ್ರಾಫಿಕ್ ನಡುವೆಯೂ ಜಾಗ ಮಾಡಿಕೊಂಡು ನಿಗದಿತ ಸಮಯದಲ್ಲಿ ಯಲಹಂಕ ರೈಲ್ವೆ ಜಂಕ್ಷನ್ ತಲುಪಿದ್ದಾನೆ. ಅಲ್ಲಿಗೆ ರೈಲು ಬರುವ ಐದು ನಿಮಿಸದ ಮೊದಲೇ ಅಲ್ಲಿದ್ದಾನೆ. ಇದರಿಂದ ಖುಷಿಯಾದ ಆದಿಲ್ ಮತ್ತು ಆತನ ಸ್ಮೇಹಿತ, ಆಟೋ ಡ್ರೈವರ್‌ಗೆ 2500 ರೂಪಾಯಿ ಬಹುಮಾನ ಕೊಟ್ಟಿದ್ದಾರೆ.