BengaluruCrime

ಕಂಟೇನರ್‌ನಲ್ಲಿ ಎಟಿಎಂ ಯಂತ್ರ ಕದ್ದೊಯ್ದ ಕಳ್ಳರು

ಬೆಂಗಳೂರು; ಬೆಳ್ಳಂದೂರಿನ ಹರಳೂರು ರಸ್ತೆಯಲ್ಲಿ ಕಳ್ಳರು ಎಟಿಎಂ ಯಂತ್ರವನ್ನು ಕದ್ದೊಯ್ದಿದ್ದಾರೆ. ಎಟಿಎಂ ಯಂತ್ರವನ್ನು ಕಂಟೇನರ್​ನಲ್ಲಿ ತುಂಬಿಸಿಕೊಂಡು ಪರಾರಿಯಾಗಿದ್ದಾರೆ.

ಬ್ಯಾಂಕ್ ಆಫ್ ಬರೋಡಾದ ಎಟಿಎಂ ಯಂತ್ರ ಇದಾಗಿದ್ದು, ಡಿ.10ರಂದು ರಾತ್ರಿ 2.30ರ ಸುಮಾರಿಗೆ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಆರೋಪಿಗಳ ಪತ್ತೆಗೆ ಪೊಲೀಸರು ಶೋಧಕಾರ್ಯ ಆರಂಭಿಸಿದ್ದಾರೆ.

Share Post