BengaluruCinemaHealth

ನಟ ಹಾಗೂ ಕಿರುತೆರೆ ನಿರ್ದೇಶಕ ನಿತಿನ್‌ ಗೋಪಿ ಹಠಾತ್‌ ನಿಧನ

ಬೆಂಗಳೂರು; ಬಾಲ ನಟನಾಗಿ ಕನ್ನಡಿಗರ ಹೃದಯ ಗೆದ್ದಿದ್ದ, ಕಿರುತೆರೆಯಲ್ಲಿ ಧಾರಾವಾಹಿಗಳನ್ನು ನಿರ್ದೇಶನ ಮಾಡುತ್ತಿದ್ದ ನಿತಿನ್‌ ಗೋಪಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಇಟ್ಟಮುಡುವಿನ ಅಪಾರ್ಟ್‌ಮೆಂಟ್‌ನಲ್ಲಿ ನಿತಿನ್‌ ವಾಸವಿದ್ದರು. ಇಂದು ಮುಂಜಾನೆ ನಾಲ್ಕು ಗಂಟೆ ಸಮಯದಲ್ಲಿ ಅವರಿಗೆ ಹೃದಯಾಘಾತವಾಗಿತ್ತು. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಾರ್ಗಮಧ್ಯೆಯೇ ಅವರು ಸಾವನ್ನಪ್ಪಿದ್ದಾರೆ.

ವಿಷ್ಣುವರ್ಧನ್ ನಟನೆಯ ‘ಹಲೋ ಡ್ಯಾಡಿ’, ಚಿರಬಾಂಧವ್ಯ, ನಿಶಬ್ಧ, ಕೆರಳಿದ ಕೇಸರಿ ಸೇರಿ ಹಲವಾರು ಸಿನಿಮಾಗಳಲ್ಲಿ ನಿತಿನ್‌ ಬಾಲನಟರಾಗಿ ನಟಿಸಿದ್ದರು. ‘ಶಾಲೆಗೆ ಈ ದಿನ ರಜಾ’ ಹಾಡಿನ ಮೂಲಕ ನಿತಿನ್‌ ಹೆಸರಾಗಿದ್ದರು. ನಿತಿನ್‌ಗೆ 39 ವರ್ಷ ವಯಸ್ಸಾಗಿತ್ತು.

Share Post