BengaluruCrime

ಕೋಮು ದ್ವೇಷಕ್ಕೆ ಬಲಿ ಪ್ರಕರಣ; ನಾಲ್ವರ ಕುಟುಂಬಗಳಿಗೆ ತಲಾ 25 ಲಕ್ಷ ಪರಿಹಾರ

ಬೆಂಗಳೂರು; ಕಳೆದ ಕೆಲ ವರ್ಷಗಳಲ್ಲಿ ಕೋಮು ದ್ವೇಷಕ್ಕೆ ಹಲವರು ಬಲಿಯಾಗಿದ್ದರು. ಅದರಲ್ಲಿ ನಾಲ್ವರ ಕುಟುಂಬಗಳಿಗೆ ರಾಜ್ಯ ಸರ್ಕಾರ ಪರಿಹಾರ ಘೋಷಣೆ ಮಾಡಿದೆ. ಕರಾವಳಿಯಲ್ಲಿ ಕೋಮು ದ್ವೇಷದಿಂದ ಹತ್ಯೆಯಾದ ನಾಲ್ವರು ಕುಟುಂಬಗಳಿಗೆ ತಲಾ 25 ಲಕ್ಷ ರೂಪಾಯಿ ಪರಿಹಾರ ನೀಡೋದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ.

2018ರಿಂದೀಚೆಗೆ ಮಸೂದ್‌, ಫಾಝಿಲ್‌, ಜಲೀಲ್‌ ಹಾಗೂ ದೀಪಜ್‌ ರಾವ್‌ ಎಂಬುವವರನ್ನು ಹತ್ಯೆ ಮಾಡಲಾಗಿತ್ತು. ಈ ನಾಲ್ವರು ಕುಟುಂಬಗಳಿಗೆ ಸರ್ಕಾರ ಪರಿಹಾರ ನೀಡಿದೆ. ಬಿಜೆಪಿ ಸರ್ಕಾರದ ಸಂದರ್ಭದಲ್ಲಿ ಈ ನಾಲ್ವರ ಹತ್ಯೆಯಾಗಿದ್ದು, ಇವರಿಗೆ ಪರಿಹಾರ ನೀಡಿರಲಿಲ್ಲ. ಈ ಕಾರಣಕ್ಕಾಗಿ ಕಾಂಗ್ರೆಸ್‌ ಪರಿಹಾರ ಘೋಷಣೆ ಮಾಡಿದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಈ ಪರಿಹಾರ ವಿತರಿಸಲಾಗುತ್ತದೆ. 2018ರ ಜನವರಿ 3 ರಂದು ದೀಪಕ್ ರಾವ್ ಹತ್ಯೆಯಾಗಿತ್ತು. ಇದು ಸಿದ್ದರಾಮಯ್ಯ ಸರ್ಕಾರದ ವೇಳೆಯಲ್ಲೇ ನಡೆದ ಹತ್ಯೆಯಾಗಿತ್ತು.

ಅನಂತರ 2022ರ ಜುಲೈ 19ರಂದು ಬೆಳ್ಳಾರೆಯ ಮಸೂದ್, ಅದೇ ತಿಂಗಳ 28ರಂದು ಮಂಗಳಪೇಟೆಯ ಮುಹಮ್ಮದ್ ಫಾಝಿಲ್, 2022ರ ಡಿಸೆಂಬರ್ 24ರಂದು ಅಬ್ದುಲ್ ಜಲೀಲ್ ಹತ್ಯೆಯಾಗಿತ್ತು. ಇವೆಲ್ಲವೂ ಕೋಮು ದ್ವೇಷದಿಂದಲೇ ನಡೆದ ಹತ್ಯೆಗಳಾಗಿದ್ದವು. ಈ ಹಿನ್ನೆಲೆಯಲ್ಲಿ ಸರ್ಕಾರ ಪರಿಹಾರ ನೀಡಿದೆ.

Share Post