BengaluruCrime

ಮಾಜಿ ಪ್ರಿಯಕರನ ವಶೀಕರಣಕ್ಕೆ 8.20 ಲಕ್ಷ ಕಳೆದುಕೊಂಡ ಯುವತಿ

ಬೆಂಗಳೂರು; ದೂರವಾಗಿದ್ದ‌ ಇನಿಯನನ್ನು ಮತ್ತೆ ಪಡೆಯಲು‌‌ ಬ್ಲ್ಯಾಕ್ ಮ್ಯಾಜಿಕ್‌‌ ಮೊರೆಹೋದ ಯುವತಿಯೊಬ್ಬಳು ಲಕ್ಷ ಲಕ್ಷ ಕಳೆದುಕೊಂಡಿದ್ದಾಳೆ. ಗೆಳೆಯನೊಬ್ಬನ ಸಹಾಯದಿಂದ ಅನ್ ಲೈನ್ ಜ್ಯೋತಿಷಿಯೊಬ್ಬನನ್ನ ಸಂಪರ್ಕಿಸಿರುವ ಯುವತಿ ಆತನಿಗೆ ಬರೋಬ್ಬರಿ 8 ಲಕ್ಷ 20 ಸಾವಿರ ರೂಪಾಯಿ ಕೊಟ್ಟು ಮೋಸ ಹೋಗಿದ್ದಾಳೆ.

  ಬೆಂಗಳೂರಿನ ಜಾಲಹಳ್ಳಿಯಲ್ಲಿ ವಾಸವಿರುವ ಯುವತಿ, ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಆದ್ರೆ ಈ ಸಂಬಂಧ ಬ್ರೇಕ್ ಅಪ್ ಆಗಿತ್ತು. ಹೇಗಾದರೂ ಮಾಡಿ ದೂರವಾಗಿದ್ದ ಗೆಳೆಯನನ್ನು ಮತ್ತೆ ಪಡೆಯಬೇಕೆಂದು ಆಕೆ ಜ್ಯೋತಿಷಿ ಮೊರೆ ಹೋಗಿದ್ದಳು.

   ಮೊದಲಿಗೆ ಡಿಸೆಂಬರ್ 22 ರಂದು ಮಾಜಿ ಪ್ರಿಯಕರ ಹಾಗೂ ಆತನ ಪೋಷಕರ ಮೇಲೆ ಮಾಟ ಮಂತ್ರ ಮಾಡುತ್ತೇನೆ. ಅದಕ್ಕಾಗಿ ,2.4 ಲಕ್ಷ ರೂಪಾಯಿಯನ್ನು ಅನ್ ಲೈನ್ ಮೂಲಕ ಜ್ಯೋತಿಷಿ ಹಾಕಿಸಿಕೊಂಡಿದ್ದಾನೆ. ಕೆಲ ದಿನಗಳು ಕಳೆದ ನಂತರ ಮತ್ತೆ 1.7 ಲಕ್ಷ ರೂ. ಕೇಳಿದ್ದಾನೆ. ಕೊನೆಗೆ ಹಣ ನೀಡದಿದ್ದರೆ ನಿನ್ನ ಮಾಜಿ ಪ್ರಿಯಕರನಿಗೆ ತಿಳಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ಭಯಬಿದ್ದ ಯುವತಿ ಜನವರಿ 10 ರಂದು 4.1 ಲಕ್ಷ ರೂಪಾಯಿಯನ್ನು ಆನ್ ಲೈನ್ ಮೂಲಕ ಪಾವತಿ ಮಾಡಿದ್ದಾಳೆ.

ಇದು ಹೀಗೇ ಮುಂದುವರೆದಾಗ ಯುವತಿ ತನ್ನ ಪೋಷಕರಿಗೆ ವಿಷಯ ಮುಟ್ಟಿಸಿದ್ದಾರೆ. ಯುವತಿ ಪೋಷಕರು ಈಗ ಜಾಲಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Share Post