International

ಬ್ಯಾಂಕ್‌ಗಳಿಗೆ ವಂಚನೆ; ಮಲ್ಯಗೆ ಮನೆ ತೊರೆಯುವ ಸಂಕಷ್ಟ

ಲಂಡನ್: ಲಂಡನ್‌ನ ಮನೆಯಿಂದ ವಿಜಯ ಮಲ್ಯ ಹಾಗೂ ಅವರ ಕುಟುಂಬದ ಸದಸ್ಯರನ್ನು ಹೊರಹಾಕುವಂತೆ ಲಂಡನ್‌ ಕೋರ್ಟ್‌ ಖಡಕ್‌ ಸೂಚನೆ ಕೊಟ್ಟಿದೆ ಎಂದು ವರದಿಯಾಗಿದೆ.

ಬ್ಯಾಂಕ್‌ಗಳಿಂದ ಸಾವಿರಾರು ಕೋಟಿ ರೂಪಾಯಿ ಸಾಲ ಪಡೆದು ಅದನ್ನು ತೀರಿಸಲಾಗದೆ ವಿಜಯ್‌ ಮಲ್ಯ ಹವಲು ವರ್ಷಗಳಿಂದ ಲಂಡನ್‌ ನಲ್ಲಿ ತಲೆಮರೆಸಿಕೊಂಡಿದ್ದಾರೆ. ಹೀಗಾಗಿ ಈ ಪ್ರಕರಣ ಸಂಬಂಧ ಅಲ್ಲಿನ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ವಿಜಯ್‌ ಮಲ್ಯರನ್ನು ಭಾರತಕ್ಕೆ ಹಸ್ತಾಂತರ ಮಾಡಬೇಕೆಂದು ಭಾರತ ಕೇಳಿಕೊಂಡಿದೆ.

ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸುತ್ತಿರುವ ಕೋರ್ಟ್‌, ವಿಜಯ್‌ ಮಲ್ಯ ಹಾಗೂ ಆತನ ಕುಟುಂಬದ ಸದಸ್ಯರನ್ನು ಲಂಡನ್‌ ನ ಮನೆಯಿಂದ ಹೊರಹಾಕುವಂತೆ ಸೂಚನೆ ನೀಡಿದೆ ಎಂದು ಹೇಳಿದೆ.

Share Post