ಗಣರಾಜ್ಯೋತ್ಸವದ ದಿನ ಉಗ್ರರ ದಾಳಿ ಭೀತಿ; ನವದೆಹಲಿಯಲ್ಲಿ ಕಟ್ಟೆಚ್ಚರ
ನವದೆಹಲಿ: ಜನವರಿ ೨೬ರಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಉಗ್ರರ ಬೆದರಿಕೆ ಇದೆ ಎನ್ನಲಾಗಿದೆ. ಈ ವಿಚಾರವನ್ನು ಗುಪ್ತಚರ ಏಜೆನ್ಸಿಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನಗರದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.
ಈ ಬಗ್ಗೆ ದೆಹಲಿ ಪೊಲೀಸರುನ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿದ್ದಾರೆ. ಜನವರಿ 20 ರಿಂದ ದೆಹಲಿಯಲ್ಲಿ ಯುಎವಿಗಳು, ಪ್ಯಾರಾಗ್ಲೈಡರ್‌ಗಳು ಮತ್ತು ಬಿಸಿ ಗಾಳಿಯ ಬಲೂನ್‌ಗಳು ಮತ್ತಿತರ ಹಾರಾಟವನ್ನು ನಿಷೇಧಿಸಲಾಗಿದೆ. ಈ ಆದೇಶ ಜನವರಿ 20 ರಿಂದ ಫೆಬ್ರವರಿ 15ರವರೆಗೂ ಜಾರಿಯಲ್ಲಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಗಣರಾಜೋತ್ಸವ ದಿನದಂದು ಉಗ್ರರ ದಾಳಿ ಬೆದರಿಕೆ ಇದೆ. ಈ ಕುರಿತ ವರದಿಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ದೆಹಲಿ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಗಣರಾಜ್ಯೋತ್ಸವ ಪರೇಡ್ ನಡೆಯುವ ಸ್ಥಳದಲ್ಲಿ ಅತ್ಯಂತ ಕಟ್ಟೆಚ್ಚರ ವಹಿಸಲಾಗಿದ್ದಯ, ಎಲ್ಲಾ ಕಡೆ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ.