Crime

ಆಟೋ ಚಾಲಕನ ಜೊತೆ ಮಹಿಳಾ ಪಿಎಸ್‌ಐ ಕಿತ್ತಾಟ

ಮೈಸೂರು: ಇತ್ತೀಚೆಗೆ ಪೊಲೀಸರೇ ಸುದ್ದಿಯಾಗುತ್ತಿದ್ದಾರೆ. ಅದ್ರಲ್ಲೂ ಅವರೇ ಕಾನೂನು ಉಲ್ಲಂಘಿಸುತ್ತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗುತ್ತಿದೆ. ಅಂದಹಾಗೆ ಮೊದಲ ಲಾಕ್‌ಡೌನ್‌ ಸಮಯದಲ್ಲಿ ನಂಜನಗೂಡು ಪೆಟ್ರೋಲ್‌ ಬಂಕ್‌ ಮಾಲೀಕರಿಗೆ ಅವಾಜ್‌ ಹಾಕಿ ಸುದ್ದಿಯಾಗಿದ್ದ ಪೊಲೀಸ್‌ ಇನ್ಸ್‌ಪೆಕ್ಟರ್‌ ಯಾಸ್ಮಿನ್‌ ತಾಜ್‌ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ರಸ್ತೆಯಲ್ಲಿ ಸಾರ್ವಜನಿಕರ ಜೊತೆ ಕಿರಕ್‌ ಮಾಡಿಕೊಂಡಿದ್ದಾರೆ.

ಮೈಸೂರಿನ SP ಕಚೇರಿ ಬಳಿ ಟರ್ನ್ ಮಾಡುವ ವೇಳೆ ಆಟೋ ಹಾಗೂ ಸಿವಿಲ್‌ ಡ್ರೆಸ್‌ನಲ್ಲಿದ್ದ ಯಾಸ್ಮಿನ್‌ ತಾಜ್‌ ಅವರ ಸ್ಕೂಟರ್‌ ಡಿಕ್ಕಿಯಾಗಿವೆ. ಈ ಸಂಬಂಧ ಪೊಲೀಸ್‌ ಇನ್ಸ್‌ಪೆಕ್ಟರ್‌ ಯಾಸ್ಮಿನ್‌ ರಾಜ್‌ ಆಟೋ ಚಾಲಕನ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿದಾರೆ ಎಂದು ಹೇಳಲಾಗಿದೆ. ಇದರ ವಿಡಿಯೋವೊಂದು ಈಗ ವೈರಲ್‌ ಆಗಿದೆ.

ಸಣ್ಣ ಅವಘಡವಾಗಿದ್ದು, ಈ ವೇಳೆ ಯಾಸ್ಮಿನ್‌ ತಾಜ್‌ ಕೆರಳಿದ್ದಾರೆ. ರಸ್ತೆಯಲ್ಲಿ ರಂಪಾಟ ಮಾಡಿದ್ದಾರೆ. ಇದನ್ನು ನೋಡಿದ ಸಾರ್ವಜನಿಕರು ಪಿಎಸ್‌ಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಿಎಸ್ಐ ಆದ ಮಾತ್ರಕ್ಕೆ ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳ ಬಳಕೆ ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

Share Post