ಬಳ್ಳಾರಿಯಲ್ಲಿ ಕೊರೊನಾ ಸ್ಪೋಟ : ಎಲ್ಲಾ ಧಾರ್ಮಿಕ ಕ್ಷೇತ್ರಗಳು ಬಂದ್
ಬಳ್ಳಾರಿ : ಬಳ್ಳಾರಿಯಲ್ಲಿ ಕೊರೊನಾ ಸ್ಪೋಟಗೊಂದಿದೆ. ನಿನ್ನೆ ಒಂದೇ ದಿನ ಜಿಲ್ಲೆಯಲ್ಲಿ 568 ಪಾಸಿಟಿವ್ ಕೇಸ್ ಬಂದಿದ್ದು ಸದ್ಯ ಪಾಸಿಟಿವಿಟಿ ರೇಟ್ 15ರಷ್ಟಿದೆ.
ಎಚ್ಚೆತ್ತ ಜಿಲ್ಲಾಡಳಿತ ಬಳ್ಳಾರಿ ಮತ್ತು ವಿಜಯನಗರ ಅವಳಿ ನಗರಗಳಿಗೆ ರಾಜ್ಯ ಸರ್ಕಾರದ ನಿಯಮಗಳ ಜೊತೆಗೆ ಇನ್ನಷ್ಟು ಬಿಗಿ ರೂಲ್ಸ್ ಅನ್ನು ಜಾರಿ ಮಾಡಿದೆ. ಈ ಎಲ್ಲಾ ಕಠಿಣ ರೂಲ್ಸ್‌ಗಳು ಇಂದಿನಿಂದ ಜಾರಿಯಾಗಲಿವೆ.
ಜಿಲ್ಲಾಡಳಿತದ ಪ್ರತ್ಯೇಕ ರೂಲ್ಸ್ ಇಂತಿವೆ
ಜನವರಿ 23ರ ವರೆಗೆ ಶಾಲಾ, ಕಾಲೇಜು, ವಿವಿಗಳು ಬಂದ್
ಜನವರಿ 31ರ ವರೆಗೆ ದೇವಸ್ಥಾನ, ಚರ್ಚ್, ಮಸೀದಿ, ಈಜುಕೊಳ, ಥಿಯೇಟರ್ ಕ್ಲೋಸ್
ಮದುವೆಗೆ ಕೇವಲ 50ಜನರಿಗೆ ಮಾತ್ರ ಅವಕಾಶ
ಯಾವುದೇ ಸಭೆ ಸಮಾರಂಭಗಳಿಗೆ ಅವಕಾಶ ಇಲ್ಲ.
ಎಲ್ಲಾ ಧಾರ್ಮಿಕ ಕ್ಷೇತ್ರಗಳಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿದೆ. ಇನ್ನು ನೈಟ್ ಕರ್ಫ್ಯೂ ಸಮಯವನ್ನು ಕೂಡ ವಿಸ್ತರಿಸಿದೆ. ರಾತ್ರಿ 8 ಗಂಟೆಯಿಂದಲೇ ನೈಟ್ ಕರ್ಫ್ಯೂ ಆರಂಭವಾಗಲಿದ್ದು, ಬೆಳಗ್ಗೆ 6 ರವರೆಗೂ ನೈಟ್ ಕರ್ಫ್ಯೂ ಇರಲಿದೆ.