ನಟ ಧನುಷ್ ದಾಂಪತ್ಯ ಜೀವನ ಅಂತ್ಯ – ರಜನಿಕಾಂತ್ ಪುತ್ರಿಗೆ ವಿಚ್ಚೇದನ
ಚೆನೈ : ತಮಿಳಿನ ಸೂಪರ್ ಸ್ಟಾರ್ ಎನಿಸಿಕೊಂಡಿರುವ ರಜನಿಕಾಂತ್ ಅವರ ಪುತ್ರಿಯ ಬಾಳಲ್ಲಿ ವಿಚ್ಚೇದನದ ಬಿರುಗಾಳಿ ಎದ್ದಿದೆ. 18 ವರ್ಷಗಳ ದಾಂಪತ್ಯ ಜೀವನಕ್ಕೆ ತೆರೆ ಬಿದ್ದಿದೆ. ನಟ ಧನುಷ್ ಅವರ ಕೈಹಿಡಿದಿದ್ದರು ಐಶ್ವರ್ಯ.
2004 ರಲ್ಲಿ ಐಶ್ವರ್ಯಾ ಹಾಗೂ ಧನುಷ್ ಪ್ರೀತಿಸಿ ಮದುವೆಯಾಗಿದ್ದರು. ಈಗ ತಮ್ಮ ಸಾಮಾಜಿಕ ಖಾತೆಗಳ ಮೂಲಕ ದಾಂಪತ್ಯ ಜೀವನವು ಮುರಿದು ಬಿದ್ದಿರುವುದನ್ನು ಅಧಿಕೃತಗೊಳಿಸಿದ್ದಾರೆ.
ಈ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಯಾತ್ರಾ ಮತ್ತು ಲಿಂಗ ಎಂಬ ಮಕ್ಕಳಿದ್ದಾರೆ. 2006 ಮತ್ತು 2010 ರಲ್ಲಿ ಜನಿಸಿದವರಾಗಿದ್ದಾರೆ. ಐಶ್ವರ್ಯ ಸಿನಿಮಾ ನಿರ್ದೇಶಕಿ ಆಗಿ ಧನುಷ್ ಅವರ 3 ಸಿನಿಮಾವನ್ನು ನಿರ್ದೇಶನ ಮಾಡಿದ್ದರು.
ರಜನಿ ಅವರ ಎರಡನೇ ಮಗಳು ಸೌಂದರ್ಯ ದಾಂಪತ್ಯವು ಇತ್ತೀಚೆಗೆ ಮುರಿದು ಬಿದ್ದಿತ್ತು, ಅವರು ಇನ್ನೊಂದು ಮದುವೆ ಕೂಡ ಆಗಿದ್ದಾರೆ.
????? pic.twitter.com/hAPu2aPp4n
— Dhanush (@dhanushkraja) January 17, 2022