Bengaluru

ಇಂದು 27,156 ಜನರಿಗೆ ಕೋವಿಡ್ : ಸೋಂಕಿನಿಂದ 14 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ 24ಗಂಟೆಗಳಲ್ಲಿ  27,156 ಮಂದಿಗೆ ಕೋವಿಡ್-‌19 ಸೋಂಕು ತಗುಲಿದೆ. ಸೋಂಕಿನಿಂದ ಇಂದು  14 ಮಂದಿ ಸಾವನ್ನಪ್ಪಿದ್ದಾರೆ, 7827 ಜನರು ಸೋಂಕಿನಿಂದ ಚೇತರಿಸಿಕೊಂಡು  ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.  ಪ್ರಸ್ತುತ 27,156 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ದರ ಶೇ 12.45 ಇದೆ. ನಿನ್ನೆಗಿಂತ ಇಂದು ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ. ಪಾಸಿಟಿವಿಟಿ ದರ ನಿನ್ನೆ 19.25ಇತ್ತು ಇಂದು 12.45ಕ್ಕೆ ಇಳಿದಿದೆ.

ಬೆಂಗಳೂರಿನಲ್ಲಿ  15,947 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಐವರು ಮೃತಪಟ್ಟಿದ್ದಾರೆ, 4888 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ನಗರದಲ್ಲಿ ಪ್ರಸ್ತುತ 1,57,254 ಸಕ್ರಿಯ ಪ್ರಕರಣಗಳಿದ್ದು ಈವರೆಗೆ ಒಟ್ಟು 16,458 ಜನರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಈವರೆಗೆ ಒಟ್ಟು 14,32,754 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 12,59,041 ಜನರು ಚೇತರಿಸಿಕೊಂಡಿದ್ದಾರೆ. ಎಂದು ರಾಜ್ಯ ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

 

Share Post