ಮಾನವೀಯತೆ ಮರೆತ ಗ್ರಾಮಸ್ಥರು: ಪಿಎಸ್ಐ ತರಾಟೆ
ತುಮಕೂರು: ವಿನಾಕಾರಣ ನಡೆದ ಗಲಾಟೆಯಲ್ಲಿ ಓರ್ವ ವ್ಯಕ್ತಿ ಅಸ್ವಸ್ಥನಗಿ ರಸ್ತೆಯಲ್ಲಿ ಬಿದ್ದಿದ್ದಾನೆ. ಆತನನ್ನು ಆಸ್ಪತ್ರೆಗೆ ಸೇರಿಸದ ಜನಕ್ಕೆ ಪಿಎಸ್ಐ ತರಾಟೆ ತೆಗೆದುಕೊಂಡಿರುವ ಘಟನೆ ತುಮಕೂರಿನ ಮಧುಗುರಿ ತಾಲೂಕಿನ ಮಾಡಗಾನಹಟ್ಟಿಯಲ್ಲಿ ನಡೆದಿದೆ.
ಯಾವುದೋ ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಯಲ್ಲಿ ತಿಮ್ಮರಾಜು ಎಂಬ ವ್ಯಕ್ತಿ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದಾಗಿ ತಿಮ್ಮರಾಜು ಅಸ್ವಸ್ಥನಾಗಿ ರಸ್ತೆಯಲ್ಲೇ ಬಿದ್ದಿದ್ದಾನೆ. ಯಾರೊಬ್ಬರೂ ಆತನನ್ನು ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡಲಿಲ್ಲ. ಸ್ಥಳಕ್ಕೆ ಪಿಎಸ್ಐ ಲಕ್ಷ್ಮಿನಾರಾಯಣ ಧಾವಿಸಿ ಅಸ್ವಸ್ಥನಾದ ವ್ಯಕ್ತಿಯನ್ನು ತಮ್ಮ ಪೊಲೀಸ್ ವಾಹನದಲ್ಲೃ ಆಸ್ಪತ್ರೆಗೆ ಕಳುಹಿಸಿದ್ದಾರೆ. ರಸ್ತೆಯಲ್ಲಿ ಅನಾಥವಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಆಸ್ಪತ್ರೆಗೆ ಸೇರಿಸದೆ ಮೂಕ ಪ್ರೇಕ್ಷಕನಂತೆ ನೋಡುತ್ತಿದ್ದ ಜನರನ್ನು ಪಿಎಸ್ಐ ತರಾಟೆಗೆ ತೆಗೆದುಕೊಂಡ್ರು. ಆರೋಗ್ಯ ಸರಿಯಿಲ್ಲದವರನ್ನು ಮೊದಲು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆಯಬೇಕು ಅದು ಬಿಟ್ಟು ಹೀಗೆ ನಿಂತುಕೊಂಡು ನೋಡೊದಲ್ಲ, ನಿಮ್ಮ ಮನೆಯವರಿಗೆ ಹೀಗೆ ಆಗಿದ್ರೆ ಸುಮ್ಮನೆ ನೋಡ್ತಿದ್ರಾ ಎಂದು ಖಾರವಾಗಿ ನುಡಿದಿದ್ದಾರೆ.