ಕರೆಂಟ್ ಶಾಕ್ನಿಂದ ಮೂವರು ಯೋಧರು ಮೃತ: ೯ ಮಂದಿಗೆ ಗಾಯ
ಬಿಹಾರ್: ಹೈವೋಲ್ಟೇಜ್ ವಿದ್ಯುತ್ ಸ್ಪರ್ಶದಿಂದಾಗಿ ತರಬೇತಿ ಪಡೆಯುತ್ತಿದ್ದ ಮೂವರು ಯೋಧರು ಮೃತಪಟ್ಟ ದಾರುಣ ಘಟನೆ ಬಿಹಾರದ ಸುಪಾಲ್ ಪ್ರಾಂತ್ಯದ ಬೀರ್ಪೂರ್ ಕ್ಯಾಂಪ್ನಲ್ಲಿ ನಡೆದಿದೆ. ದುರ್ಘಟನೆಯಲ್ಲಿ ಒಂಭತ್ತು ಮಂದಿಗೆ ಗಾಯಗಳಾಗಿದ್ದು. ನಾಲ್ವರ ಪರಿಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿಯಿದೆ. ಸಶಸ್ತ್ರ ಮೀಸಲು ಪಡೆಯ 45ನೇ ಬೆಟಾಲಿಯನ್ ಯೋಧರು ಟಂಟ್ಗಳನ್ನು ತೆಗೆಯುವಾಗ ಈ ದುರ್ಘಟನೆ ಸಂಭವಿಸಿದೆ.
ಮಹಾರಾಷ್ಟ್ರದ ಅತುಲ್ ಪಾಟೀಲ್ ಪರಶುರಾಮ್ ಸಬರ್, ಮಹೇಂದ್ರ ಚಂದ್ರ, ವಿದ್ಯುತ್ ಶಾಕ್ನಿಂದಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ ಕುಮಾರ್ ಬೊಪ್ಪ, ನರಸಿಂಗ್ ಚೌಹಾಣ್, ಚಂದ್ರಶೇಖರ್, ಮಾಂಡ್ವ ರಾಜೇಂದ್ರ, ಮಹಮ್ಮದ್ ಶಂಷಾದ್, ಸುಕುಮಾರ್ ವರ್ಮ, ಸೋಲೊ ಲಾಳ್ ಯಾದವ್, ಆನಂದ್ ಕಿಶೋರ್ ಎಂಬುವವರನ್ನು ಸಬ್ ಡಿವಿಷನಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಟ್ರೈನಿಂಗ್ ಮುಗಿಯುತ್ತಿದ್ದಂತೆ ಹಾಕಿದ್ದ ಟೆಂಟ್ಗಳನ್ನು ತೆಗೆಯುವ ವೇಳೆ ಟೆಂಟ್ಗೆ ಹೈವೋಲ್ಟೇಜ್ ವೈರ್ ಟಚ್ ಆಗಿದೆ. ಟೆಂಟ್ನಲ್ಲಿದ್ದ ಯೋಧರು ಸ್ಥಳದಲ್ಲಿ ಸಾವನ್ನಪ್ಪಿದ್ರೆ ಕೆಲವರು ಆಸ್ಪತ್ರೆ ಪಾಲಾಗಿದ್ದಾರೆ. ಘಟನೆಯಿಂದ ಕ್ಯಾಂಪ್ನನಲ್ಲಿ ನೀರವ ಮೌನ ಆವರಿಸಿದೆ. ಹೈ ಟೆನ್ಷನ್ ವೈರ್ಅನ್ನು ಅಲ್ಲಿಂದ ತೆಗೆದುಕಾಕಬೇಕೆಂದು ಈ ಮೊದಲಿನಿಂದಲೂ ಅಧಿಕಾರಿಗಳ ಗಮನಕ್ಕೆ ತಂದರೂ ಕಾರ್ಯಪ್ರವೃತ್ತರಾಗಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯತೆಯಿಂದ ಇಂದು ಮೂವರು ಯೋಧರು ಸಾವನ್ನಪ್ಪಬೇಕಾಯಿತು. ಸಂಕ್ರಾಂತಿ ಹಬ್ಬದ ದಿನ ಯೋಧರ ಮನೆಗಳಲ್ಲಿ ಶೋಕದ ವಾತಾವರಣ ಮಡುಗಟ್ಟಿದೆ.