Health

ನಾಡೋಜ ಚನ್ನವೀರ ಕಣವಿಗೆ ಕೋವಿಡ್‌ ಸೋಂಕು

ಧಾರವಾಡ : ಹಿರಿಯ ಕವಿ ನಾಡೋಜ ಚನ್ನವೀರ ಕಣವಿ ಅವರಿಗೆ ಕೋವಿಡ್‌ ಸೋಂಕು ದೃಢವಾಗಿದೆ. 93 ವರ್ಷದ ಕಣವಿ ಅವರಿಗೆ ಅನಾರೋಗ್ಯದ ಕಾರಣ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆಅಗ ಕೋವಿಡ್‌ ಟೆಸ್ಟ್‌ ಮಾಡಿಸಿದಾಗ ಪಾಸಿಟಿವ್‌ ಎಂದು ವರದಿ ಬಂದಿದೆ

ಚೆಂಬೆಳಕಿನ ಕವಿ ಎಂದೇ ಖ್ಯಾತಿ‌ ಪಡೆದಿರುವ ಕಣವಿ ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಧಾರವಾಡ ಜಿಲ್ಲೆಯಲ್ಲಿಯೂ ಕೋವಿಡ್‌ ಕೇಸ್‌ಗಳು ಏರಿಕೆ ಆಗ್ತಿದೆ. ದಿನಕ್ಕೆ 100 ಇದ್ದ ಕೇಸ್‌ಗಳು ಈಗ 400ರ ಗಡಿಗೆ ಬಂದು ತಲುಪಿದೆ

Share Post