Bengaluru

ಮೇಕೆದಾಟು ಸ್ವಾರ್ಥದ ಯೋಜನೆ: ನಟ ಚೇತನ್‌ ಆರೋಪ

ಬೆಂಗಳೂರು: ವ್ಯರ್ಥವಾಗಿ ಹರಿದು ಸಮುದ್ರದ ಪಾಲಾಗುವ ನೀರಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಲು ಕರ್ನಾಟಕ ರಾಜ್ಯ ಸರ್ಕಾರ ನಿರ್ಧರಿಸಿತ್ತು. ತಮಿಳುನಾಡಿನ ಖ್ಯಾತೆಯಿಂದ ಸದ್ಯ ಇದು ನೆನೆಗುದುಗೆ ಬಿದ್ದಿದೆ. ಆದ್ರೆ ಈ ಅನುಷ್ಠಾನಕ್ಕೆ ಬರಬೇಕೆಂದು ಮೊನ್ನೆ ರಾಜ್ಯ ಕಾಂಗ್ರೆಸ್‌ ನಾಯಕರು ಪಾದಯಾತ್ರೆ ಕೈಗೊಂಡಿದ್ರು. ಕೊರೊನಾ ಸಂಕಷ್ಟದ ನಡುವೆ ಜನರ ಆರೋಗ್ಯದ ದೃಷ್ಟಿಯಿಂದ ಪಾದಯಾತ್ರೆಯನ್ನು ಅರ್ಧಕ್ಕೆ ಕೈಬಿಟ್ಟರು. ಆದ್ರೆ ಈ ಯೋಜನೆ ಬಗ್ಗೆ ಪರಿಸರವಾದಿಗಳು ಹೇಳೋದೆ ಬೇರೆ. ಈ ಯೋಜನೆ ಅನುಷ್ಠನಕ್ಕೆ ಬರಬಾರ್ದು. ಇದು ಕೇವಲ ಸ್ವಾರ್ಥತೆಯಿಂದ ಕೂಡಿದೆ. ಇದು ರಾಜಕೀಯ ನಾಯಕರು ತಮ್ಮ ಬೇಳೆ ಬೇಯಿಸಿಕೊಳ್ಳಲು ತೆಗೆದುಕೊಂಡ ತೀರ್ಮಾನ ಎಂದು ನಟ ಚೇತನ್‌ ಆರೋಪಿಸಿದ್ದಾರೆ.

ಮೇಕೆದಾಟು ಯೋಜನೆ ಪೂರ್ಣ ವೆಚ್ಚ 9,000ಕೋಟಿ. ಇದರ ಜೊತೆಗೆ ಡ್ಯಾಂ ನಿರ್ಮಾಣಕ್ಕೆ ಸುತ್ತಮುತ್ತಲಿರುವ ಬರೋಬ್ಬರಿ  12 ರಿಂದ 18 ಸಾವಿರ ಎಕರೆ ಕಾಡು ನಿರ್ನಾಮ ಆಗುತ್ತೆ. ಅಲ್ಲಿನ ಜನರನ್ನು ಒಕ್ಕಲೆಬ್ಬಿಸುವ ಕೆಲಸ ನಡೆಯುತ್ತೆ. ಸಾವಿರಾರು ಜನರ ಬದುಕು ಕಿತ್ತುಕೊಳ್ಳುವಂತಹ ಯೋಜನೆ ಬೇಡವೇ ಬೇಡ ಎಂಬುದು ಪರಿಸರವದಿಗಳ ವಾದ. ರೈತರ ಮೇಲೆ ಅಷ್ಟೊಂದು ಕಾಳಜಿ ನಿಮಗಿದ್ದರೆ. ಕೆರೆ ಕುಂಟೆ ನಿರ್ಮಾಣ ಮಾಡಿ ನೀರಿನ ಮರುಬಳಕೆಗೆ ಅವಕಾಶ ನೀಡಿ. ಅದು ಬಿಟ್ಟು ಹೀಗೆ ಕಾಡನ್ನು ನಾಶ ಮಾಡಿ, ಜನರನ್ನು ಒಕ್ಕಲೆಬ್ಬಿಸಿ ಅಲ್ಲಿ ಹೇಳಹೆಸರಿಲ್ಲದಂತೆ ಮಾಡುವ ಈ ರಾಜಕಾರಣಿಗಳ ಪ್ರಯತ್ನ ಸರಿಯಿಲ್ಲ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ನಾಯಕರು ಕಾಂಟ್ರಾಕ್ಟರ್‌ಗಳಾಗಿ ಕೆಲಸ ಮಾಡ್ತಿದಾರೆ. ನಾಡು, ಜನರ ಉಜ್ವಲತೆಗಾಗಿ ಪರಿಸರ ಸ್ನೇಹಿ ಯೋಜನೆಗಳನ್ನು ರೂಪಿಸಿ, ಅಣೆಕಟ್ಟಿನಿಂದ ಆಗುವ ಪ್ರಯೋಜನೆಗಿಂತ ಅಪ್ರಯೋಜನೆಗಳೇ ಹೆಚ್ಚು. ಇದು ತಮಿಳುನಾಡು ಸರ್ಕಾರದ ವಿವಾದವಲ್ಲ. ಪರಿಸರದ ಮೇಲಿನ ಯುದ್ಧ ಎಂದು ಚೇತನ್‌ ಅಹಿಂಸಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Share Post