ಹಳಿ ತಪ್ಪಿದ ಗುವಾಹಟಿ-ಬಿಕಾನೇರ್ ಎಕ್ಸ್‌ಪ್ರೆಸ್ ರೈಲು; ಮೂವರು ಪ್ರಯಾಣಿಕರ ಸಾವು
ಗುವಾಹಟಿ: ಗುವಾಹಟಿ-ಬಿಕಾನೇರ್ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿದೆ. ಪಶ್ಚಿಮ ಬಂಗಾಳದ ದೋಮೋಹನಿ ಎಂಬಲ್ಲಿ ರೈಲು ಹಳಿ ತಪ್ಪಿದ್ದು, ಎರಡು ಬೋಗಿಗಳು ಉರುಳಿಬಿದ್ದಿವೆ. ದುರ್ಘಟನೆಯಲ್ಲಿ ಮೂವರು ಪ್ರಯಾಣಿಕರು ಸಾವನ್ನಪ್ಪಿದ್ದು, ೨೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಸಂಜೆ ಐದು ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಎರಡು ಬೋಗಿಗಳು ಉರುಳಿಬಿದ್ದಿದ್ದರಿಂದ ಮೂವರು ಅದರಡಿ ಸಿಲುಕಿ ಸಾವನ್ನಪ್ಪಿದ್ದಾರೆ. ಇನ್ನು ಇಪ್ಪತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
ರೈಲು ನಿಧಾನಕ್ಕೆ ಚಲಿಸುತ್ತಿದ್ದರಿಂದ ದೊಡ್ಡ ದುರಂತ ತಪ್ಪಿದಂತಾಗಿದೆ. ಉರುಳಿಬಿದ್ದ ಎರಡು ಭೋಗಿಗಳಲ್ಲಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರಗೆ ತರಲಾಗಿದೆ. ರೈಲು ಅಪಘಾತದಿಂದಾಗಿ ಈ ಮಾರ್ಗದ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ.