National

ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿಗೆ ಕೊರೊನಾ ಪಾಸಿಟಿವ್‌

ನವದೆಹಲಿ : ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಾ ಎಂ ವೀರಪ್ಪ ಮೋಯ್ಲಿಗೆ ಕೊರೊನಾ ಪಾಸಿಟಿವ್‌ ಆಗಿದೆ. ಕೊರೊನಾ ದೃಢ ಆಗಿರುವ ವಿಷಯವನ್ನು ವೀರಪ್ಪ ಮೋಯ್ಲಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ನಾನು ಇಂದು (ಬುಧವಾರ) ಸಂಜೆ ಕೋವಿಡ್‌ ಪಾಸಿಟಿವ್‌ ಆಗಿದ್ದೀನಿ. ನನಗೆ ಜ್ವರ ಮತ್ತು ಕೆಮ್ಮಿನ ಗುಣಲಕ್ಷಣಗಳು ಇವೆ. ನಾನು ವ್ಯಾಕ್ಸಿನ್‌ ಪಡೆದಿರುವ ಕಾರಣ ನನ್ನನ್ನು ಕೊರೊನಾ ಹೆಚ್ಚಾಗಿ ಬಾಧಿಸುತ್ತಿಲ್ಲ. ಇತ್ತೀಚೆಗೆ ನನ್ನ ಸಂಪರ್ಕ ಬಂದವರೆಲ್ಲರೂ ಹೋಗಿ ಟೆಸ್ಟ್‌ ಮಾಡಿಸಿಕೊಳ್ಳಿ. ನಾನು ಮನೆಯಲ್ಲಿಯೇ ಕ್ವಾರಂಟೈನ್‌ ಆಗಿದ್ದೇನೆ ಎಂದು ವೀರಪ್ಪ ಮೋಯ್ಲಿ ಹೇಳಿದ್ದಾರೆ.

Share Post