Sports

Ind vs Sa Test : ಇಂದಿನಿಂದ ಮೂರನೇ ಟೆಸ್ಟ್‌ , ಐತಿಹಾಸಿಕ ದಾಖಲೆಗೆ ಒಂದೇ ಹೆಜ್ಜೆ

ಕೇಪ್‌ಟೌನ್‌ : ಭಾರತ ಮತ್ತು ದ.ಆಫ್ರಿಕಾ ನಡುವಿನ ಮೂರನೇ ಹಾಗೂ ಕೊನೆಯ ಟೆಸ್ಟ್‌ ಪಂದ್ಯ ಇದಾಗಿದೆ. ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್‌ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ. ಸರಣಿ ಸಮಬಲ ಆಗಿರುವ ಕಾರಣ ಈ ಪಂದ್ಯ ತೀವ್ರ ಮಹತ್ವ ಪಡೆದುಕೊಂಡಿದೆ. ಮೊದಲ ಪಂದ್ಯವನ್ನು ಭಾರತ ಗೆದ್ದುಕೊಂಡರೆ ಎರಡನೇ ಪಂದ್ಯವನ್ನು ದ.ಆಫ್ರಿಕಾ ಗೆದ್ದುಕೊಂಡಿತ್ತು.

ಸುದ್ದಿಗಾರರೊಂದಿಗೆ ಮಾತನಾಡಿದ ಕೊಹ್ಲಿ ಮೂರನೇ ಟೆಸ್ಟ್‌ ಪಂದ್ಯದಲ್ಲಿ ತಾವು ಆಡುತ್ತಿರುವುದಾಗಿ ತಿಳಿಸಿದ್ದಾರೆ. ಇನ್ನು ಮಂಡಿ ನೋವಿನಿಂದ ಬಳಲುತ್ತಿರುವ ಸಿರಾಜ್‌ ಅವರು ಈ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಇನ್ನು ಹನುಮಾ ವಿಹಾರಿ ಅವರಿಗೆ ಸ್ಥಾನ ದೊರೆಯುತ್ತಾ ಇಲ್ಲವಾ ಎಂದು ಕಾದು ನೋಡಬೇಕಿದೆ.

ಕೇಪ್‌ಟೌನ್‌ ಇತಿಹಾಸವನ್ನು ಗಮನಿಸಿದಾಗ ಭಾರತ ತಂಡ ಗೆಲುವಿಗೆ ತುಸು ಹೆಚ್ಚು ಶ್ರಮಿಸಬೇಕು ಎನಿಸುತ್ತದೆ. ಇದುವರೆಗೂ ಭಾರತವು ಒಂದು ಬಾರಿಯೂ ಕೇಪ್‌ಟೌನ್‌ನಲ್ಲಿ ವಿಜಯ ಸಾಧಿಸಿಲ್ಲ. ಎರಡು ಬಾರಿ ಡ್ರಾ ಮಾಡಿಕೊಂಡಿದ್ದನ್ನು ಬಿಟ್ಟರೆ ಮಿಕ್ಕ ಮೂರು ಪಂದ್ಯಗಳಲ್ಲಿ ಭಾರತ ತಂಡ ಸೋತಿದೆ. ಇನ್ನು ವೇಗಿ ರಬಾಡಾ ಅವರು ಈ ಪಿಚ್‌ನಲ್ಲಿ ಉತ್ತಮ ಸಾಧನೆ ಹೊಂದಿದ್ದಾರೆ.

ಈ ಪಂದ್ಯವನ್ನು ಭಾರತ ಗೆದ್ದರೆ ಐತಿಹಾಸಿಕ ಸಾಧನೆ ಆಗಲಿದೆ. ಡ್ರಾ ಆದರೂ ಕೂಡ ಸಾಧನೆ ಆಗಲಿದೆ. ಸೋಲು ಮಾತ್ರ ಆಗಬಾರದು ಎಂದು ಭಾರತ ಕ್ರಿಕೆಟ್‌ ಅಭಿಮಾನಿಗಳು ಆಶಿಸುತ್ತಿದ್ದಾರೆ.

Share Post