Lifestyle

ಗಾರ್ಲಿಕ್‌ ರೈಸ್ ಮಾಡುವ ವಿಧಾನ… !

ಚಳಿಗಾಲ ಬಂತು ಅಂದರೆ ಸಾಕು ಏನಾದ್ರು ಬಿಸಿ ಬಿಸಿ ತಿಂಡಿ ತಿನ್ನಬೇಕು ಅನಿಸುತ್ತೆ. ಹಳ್ಳಿ ಕಡೆಯಲ್ಲಿದ್ದವರು ಮನೆಯಲ್ಲೇ ಹೊಸ ಹೊಸ ತಿಂಡಿಗಳನ್ನು ಮಾಡಿ ತಿನ್ನುತ್ತಾರೆ. ಆದರೆ ಸಿಟಿಯಲ್ಲಿ ಇರುವವರು ಹೋಟೆಲ್‌, ಚಾಟ್ಸ್‌ ಅಂತಾ ತಿನ್ನುವುದಕ್ಕೆ ಹೋಗುತ್ತಾರೆ. ಆದರೆ ಇದ್ದರಿಂದ ಆರೋಗ್ಯ ಹಾಳಗುತ್ತದೆ. ಉತ್ತಮ ಆರೋಗ್ಯಕ್ಕಾಗಿ ಮನೆಯಲ್ಲೇ ತಿಂಡಿಗಳನ್ನು ತಯಾರು ಮಾಡಿ. ಒಂದು ವೇಳೆ ನೀವು ರೈಸ್‌ ಬಾತ್ ಗಳನ್ನು ತಿನ್ನುದು ಬೇಸತ್ತು ಹೋಗಿರುತ್ತಾರೆ . ದಕ್ಷಿಣ ಶೈಲಿಯ ಹೊಸ ಬಾತ್‌ ಗಾರ್ಲಿಕ್‌ ರೈಸ್. ಹೇಗೆ ಮಾಡೋದು ನೋಡಣ ಬನ್ನಿ

ಬೇಕಾಗುವ ಸಾಮಗ್ರಿ
1 ಕಪ್ ಅಕ್ಕಿ
30-35 ಎಸಳು ಬೆಳ್ಳುಳ್ಳಿ
2 ಈರುಳ್ಳಿ
2 ಹಸಿ ಮೆಣಸು
2 ಒಣ ಮೆಣಸು
2 ಚಮಚ ತುಪ್ಪ / ಎಣ್ಣೆ 1/ 4 ಚಮಚ
ಸಾಸಿವೆ 1 ಚಮಚ
ಉದ್ದಿನ ಬೇಳೆ 2 ಚಮಚ
ಕಡಲೆ ಬೇಳೆ
ಕರಿಬೇವು ಕೊತ್ತಂಬರಿ ಸೊಪ್ಪು
ರುಚಿಕೆ ತಕ್ಕ ಉಪ್ಪು
ನಿಂಬೆ ಹಣ್ಣು
ಮಾಡುವ ವಿಧಾನ
ಅನ್ನ ಮಾಡಿ.  ಬಾಣಲೆ ಬಿಸಿ ಮಾಡಿ ಎಣ್ಣೆ ಅಥವಾ ತುಪ್ಪ ಹಾಕಿ ಬಿಸಿ ಮಾಡಿ ಅದರಲ್ಲಿ ಬೆಳ್ಳುಳ್ಳಿಯನ್ನು ಹಾಕಿ ಫ್ರೈ ಮಾಡಿ, ತೆಗೆದಿಡಿ. ಈಗ ಎಣ್ಣೆಗೆ ಸಾಸಿವೆ ಹಾಕಿ, ಸಾಸಿವೆ ಚಟ್‌ಪಟ್‌ ಶಬ್ದ ಮಾಡುವಾಗ ಅದಕ್ಕೆ ಕರಿಬೇವು ಹಾಕಿ. ಅದಕ್ಕೆ ತೊಗರಿ ಬೇಳೆ ಹಾಗೂ ಕಡಲೆ ಬೇಳೆ ಸೇರಿಸಿ. ಒಣ ಮೆಣಸು ಮುರಿದು ಹಾಕಿ. ಈರುಳ್ಳಿ, ಹಸಿ ಮೆಣಸು ಹಾಕಿ , ಈರುಳ್ಳಿ ಸ್ವಲ್ಪ ಕಂದು ಬಣ್ಣಕ್ಕೆ ತಿರುಗುವಾಗ, ಫ್ರೈ ಮಾಡಿದ ಬೆಳ್ಳುಳ್ಳಿ ಸೇರಿಸಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಮಿಕ್ಸ್ ಮಾಡಿ, ಗ್ಯಾಸ್ ಸ್ಟೌವ್ ಆಫ್‌ ಮಾಡಿ. ಅನ್ನ ಹಾಕಿ, ಮಿಕ್ಸ್ ಮಾಡಿ ಸ್ವಲ್ಪ ನಿಂಬೆ ರಸ ಹಿಂಡಿ ಮತ್ತೊಮ್ಮೆ ಮಿಕ್ಸ್ ಮಾಡಿ, ಬೇಕಿದ್ದರೆ ಕೊತ್ತಂಬರಿ ಸೊಪ್ಪು ಹಾಕಿ ತಿನ್ನವುದಕ್ಕೆ ರೆಡಿ

Share Post