ಮೇಕೆದಾಟು ಪಾದಯಾತ್ರೆ : ಮಾದಪ್ಪನದೊಡ್ಡಿಯಲ್ಲಿ ಊಟದ ಬ್ರೇಕ್
ರಾಮನಗರ : ಮೇಕೆದಾಟು ಪಾದಯಾತ್ರೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಬೆಳಗ್ಗೆ ದೊಡ್ಡ ಆಲನಹಳ್ಳಿಯಿಂದ ಪಾದಯಾತ್ರೆ ಶುರು ಮಾಡಿ ಈಗ ಮಾದಪ್ಪನ ದೊಡ್ಡಿಗೆ ತಲುಪಿದ್ದಾರೆ. ಊಟದ ವಿರಾಮ ತೆಗೆದುಕೊಂಡಿರುವ ಪಾದಚಾರಿಗಳು ಬೆಳಗ್ಗೆ ಇಂದ ಸುಮಾರು 7 ಕಿಮೀ ಕ್ರಮಿಸಿದ್ದಾರೆ.
ಈಗಾಗಲೇ ಸಾತನೂರು ಪೊಲೀಸ್ ಠಾಣೆಯಲ್ಲಿ 31 ಜನರ ಮೇಲೆ ದೂರು ದಾಖಲಾಗಿದೆ ಆದರೂ ಕಾಂಗ್ರೆಸ್ನವರು ಪಾದಯಾತ್ರೆ ಮುಂದುವರಿಸಿದ್ದಾರೆ. ನಮ್ಮ ನೀರು ನಮ್ಮ ಹಕ್ಕು ಎಂಬ ಘೋಷವಾಕ್ಯಗಳನ್ನು ಕೂಗುತ್ತಾ ಹೆಜ್ಜೆ ಹಾಕುತ್ತಿದ್ದಾರೆ. ಇನ್ನು ಕಾಂಗ್ರೆಸ್ ಪಕ್ಷದ ಕೆಲವು ಗಣ್ಯರು ಗೈರಾಗಿದ್ದಾರೆ. ಜ್ವರದಿಂದ ಬಳಲುತ್ತಿರುವ ಸಿದ್ದರಾಮಯ್ಯ ಕೂಡ ಇಂದು ಪಾದಯಾತ್ರೆಯಲ್ಲಿ ಭಾಗವಹಿಸುತ್ತಿಲ್ಲ.
ಈಶ್ವರ್ ಖಂಡ್ರೆ, ವಿನಯ್ ಕುಲ್ಕರ್ಣಿ, ಉಮಾಶ್ರೀ, ಪುಷ್ಪಾ ಅಮರ್ನಾಥ್, ಶಾಸಕ ನರೇಂದ್ರ ಸ್ವಾಮಿ ಸೇರಿದಂತೆ ಇನ್ನು ಮುಂತಾದವರು ಹೆಜ್ಜೆ ಹಾಕುತ್ತಿದ್ದಾರೆ.
ಸಂಜೆಯ ಹೊತ್ತಿಗೆ ಮಿಕ್ಕ ೮ ಕಿಮೀ ಕ್ರಮಿಸಿ ಕನಕಪುರ ನಗರದಲ್ಲಿ ವಾಸ್ತವ್ಯ ಹೂಡಲಿದ್ದಾರೆ.