Cinema

ಶ್ಯಾಮ್‌ ಸಿಂಗಾ ರಾಯ್‌ : ಜನವರಿ 21ರಿಂದ ಓಟಿಟಿಯಲ್ಲಿ

ಹೈದರಾಬಾದ್‌ : ಡಿಸೆಂಬರ್‌ 24 ರಂದು ಚಿತ್ರಂದಿರಗಳಲ್ಲಿ ಬಿಡುಗಡೆಯಾಗಿದ್ದ ಶ್ಯಾಮ್‌ ಸಿಂಗಾ ರಾಯ್‌ ಚಿತ್ರವು ಈಗ ಓಟಿಟಿಗೆ ಲಗ್ಗೆ ಇಟ್ಟಿದೆ. ತಲುಗಿನ ನಟ ನಾನಿ ಮತ್ತು ಸಾಯಿ ಪಲ್ಲವಿ ಅಭಿನಯದ ಶ್ಯಾಮ್‌ ಸಿಂಗಾ ರಾಯ್‌ ಸಿನಿಮಾ ಸಾಕಷ್ಟು ನಿರೀಕ್ಷೆಗಳೊಂದಿಗೆ ಥಿಯೇಟರ್‌ಗೆ ಕಾಲಿಟ್ಟಿತ್ತು. ಜನರಿಂದ ಉತ್ತಮ ರೆಸ್ಪಾನ್ಸ್‌ ಸಿಕ್ಕ ಮೇಲೆ ಈಗ ಓಟಿಟಿ ಯಲ್ಲಿ ಸ್ಟ್ರೀಮ್‌ ಆಗಲು ಸಿನಿಮಾ ಸಜ್ಜಾಗಿದೆ.

ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆ ಹೊಂದಿರುವ ಈ ಸಿನಿಮಾ ನಿರ್ದೇಶನ ಮಾಡಿರೋದು ರಾಹುಲ್‌ ಸಂಕೃತ್ಯನ್.‌ ಚಿತ್ರದಲ್ಲಿ ನಾನಿ ಎರಡು ವಿಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಸಾಯಿ ಪಲ್ಲವಿ ಅವರು ದೇವದಾಸಿ ಪಾತ್ರ ನಿಭಾಯಿಸಿದ್ದಾರೆ. ಇನ್ನು ತಾರಾಗಣದಲ್ಲಿ ಕೃತಿ ಶೆಟ್ಟಿ, ಮಡೋನಾ ಸೆಬಾಸ್ಟಿಯನ್‌ ಮುಂತಾದವರು ಇದ್ದಾರೆ.

ಸಂಕ್ರಾಂತಿ ಬಳಿಕ ಸಿನಿಮಾ ಓಟಿಟಿಯಲ್ಲಿ ಬರಲಿದೆ. ನಾಗಾರ್ಜುನ್‌ ಅವರ ಸಿನಿಮಾ ಬಂಗಾರ್ರಾಜು ಸಿನಿಮಾ ಜ.14ರಂದು ತೆರೆಗೆ ಅಪ್ಪಳಿಸಲಿದೆ. ಈ ಕಾರಣದಿಂದಲೇ ಚಿತ್ರತಂಡ ಡಿಜಿಟಲ್‌ ವೇದಿಕೆಯ ದಾರಿ ಹಿಡಿದಿರೋದು ಎನ್ನುತ್ತಿವೆ ಮೂಲಗಳು.

Share Post