National

ಹಿಮಾಚಲದಲ್ಲಿ ಭಾರಿ ಹಿಮಪಾತ; ಸಾರ್ವಜನಿಕರ ಪರದಾಟ

ಹಿಮಾಚಲ: ಹಿಮಾಚಲದಲ್ಲಿ ಹಿಮಪಾತ ಜಾಸ್ತಿಯಾಗುತ್ತಲೇ ಇದೆ. ಮಂಡಿ ಸಿರಾಜ್‌, ಕರಸೋಗ್‌ ವ್ಯಾಲಿಯಲ್ಲಿ ಇವತ್ತೂ ಕೂಡಾ ಭಾರಿ ಹಿಮಪಾತವಾಗಿದೆ. ರಸ್ತೆಗಳಲ್ಲೆಲ್ಲಾ ಹಿಮದ ರಾಶಿ ಬಿದ್ದಿದೆ. ಹೀಗಾಗಿ ವಾಹನಗಳ ಓಡಾಟಕ್ಕೆ ತೊಂದರೆಯಾಗಿತ್ತು. ಇದ್ರಿಂದಾಗಿ ಜೆಸಿಬಿಗಳ ಮೂಲಕ ಹಿಮವನ್ನು ಪಕ್ಕಕ್ಕೆ ಸರಿಸಲಾಯಿತು.

ಮಂಡಿ ಸಿರಾಜ್‌ ಹಾಗೂ ಕರಸೋಗ್‌ ವ್ಯಾಲಿ ಪ್ರಾಂತ್ಯದಲ್ಲಿ ಕಳೆದ ಕೆಲ ದಿನಗಳಿಂದ ಹೆಚ್ಚಿನ ಹಿಮಪಾತವಾಗುತ್ತಿದೆ. ಬೆಳಗ್ಗೆಯಾಗುತ್ತಿದ್ದಂತೆ ರಸ್ತೆಗಳಲ್ಲಿ, ಮನೆಗಳ ಮೇಲೆ ಹಾಗೂ ವಾಹನಗಳ ಮೇಲೆ ರಾಶಿ ರಾಶಿ ಹಿಮದ ರಾಶಿ ಬೀಳುತ್ತಿದೆ. ಹೀಗಾಗಿ, ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ.

 

Share Post