ಭರತ್ ಸುಬ್ರಮಣಿಯಂ ಭಾರತದ 73ನೇ ಚೆಸ್ ಗ್ರ್ಯಾಂಡ್ ಮಾಸ್ಟರ್
ನವದೆಹಲಿ : 14ವರ್ಷದ ಬಾಲಕ ಭರತ್ ಸುಬ್ರಮಣಿಯಂ ಭಾರತದ ೭೩ನೇ ಚೆಸ್ ಗ್ರ್ಯಾಂಡ್ ಮಾಸ್ಟರ್ ಆಗಿ ಹೊರಹೊಮ್ಮಿದ್ದಾರೆ. ಇಟಲಿಯಲ್ಲಿ ನಡೆದ ಮೂರನೇ ಮತ್ತು ಅಂತಿಮ ಜಿಎಂ ನಾರ್ಮ್ ಪೂರ್ಣಗೊಳಿಸುವ ಮೂಲಕ ಗ್ರ್ಯಾಂಡ್ ಮಾಸ್ಟರ್ ಆಗಿದ್ದಾರೆ.
ಒಂಬತ್ತು ಸುತ್ತುಗಳಲ್ಲಿ ೬.೫ ಪಾಯಿಂಟ್ಸ್ ಕಲೆ ಹಾಕಿದ ಭರತ್ ಟೂರ್ನಿಯಲ್ಲಿ ಏಳನೇಯವರಾಗಿ ಆಟ ಮುಗಿಸಿದರು.ಇದರಿಂದ ಅವರು ಮೂರನೇ ಜೀ ನಾರ್ಮ್ ಮುಟ್ಟುವುದರ ಜೊತೆಗೆ 2500 ಎಲೋ ಪಾಯಿಂಟ್ಸ್ ಅನ್ನು ದಾಟಿದರು.
ಚೆಸ್‌ನಲ್ಲಿ ಮೂರು ಜೀ ನೃಮ್ ದಾಟಿದವರಿಗೆ ಮತ್ತು ೨೫೦೦ ಎಲೋ ಪಾಯಿಂಟ್ಸ್ ಹೊಂದಿದವರು ಗ್ರ್ಯಾಂಡ್ ಮಾಸ್ಟರ್ ಆಗುತ್ತಾರೆ. ಈಗ ಭರತ್ ಅವರಿಗೆ ಅಭಿನಂದನೆಯ ಮಹಾಪೂರವೇ ಹರಿದು ಬರುತ್ತಿದೆ. ಆಲ್ ಇಂಡಿಯ ಚೆಸ್ ಫೆಡರೇಶನ್ ಕೂಡ ಭರತ್ ಅವರಿಗೆ ಶುಭ ಕೋರಿದೆ
Congratulations Bharath Subramaniyam : 73rd Grandmaster of India
All India Chess Federation congratulate Bharath for the achievement. @Bharatchess64 @DrSK_AICF @Media_SAI @ianuragthakur @chesscom_in @ChessbaseIndia
Photo : Amruta Mokal & ChessBase India pic.twitter.com/D5SiB2ZlIL— All India Chess Federation (@aicfchess) January 9, 2022