Bengaluru

ರಾಜ್ಯದಲ್ಲಿಂದು ಕೊರೊನಾ ಸ್ಫೋಟ; 12 ಸಾವಿರ ಮಂದಿಗೆ ಸೋಂಕು..!

ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ ಭಾರಿ ಏರಿಕೆಯಾಗಿದೆ. ಇಂದು ಒಂದೇ ದಿನ ಸುಮಾರು 12 ಸಾವಿರ ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಬೆಂಗಳೂರು ನಗರವೊಂದರಲ್ಲೇ 9020 ಮಂದಿಗೆ ಸೋಂಕು ತಗುಲಿದೆ.

    ಕೊರೊನಾ ಮಹಾಮಾರಿ ಇಂದು ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರದಲ್ಲೇ ಇಬ್ಬರು ಕೊರೊನಾಗೆ ಜೀವ ತೆತ್ತಿದ್ದಾರೆ. ರಾಜ್ಯಾದ್ಯಂತ ಇಂದು 12 ಸಾವಿರ ಮಂದಿಗೆ ಕೊರೊನಾ ಸೋಂಕು ತಗುಲಿದ್ದರೆ, ಗುಣಮುಖರಾದವರ ಸಂಖ್ಯೆ ಬರೀ 901 ಮಂದಿ ಮಾತ್ರ.

ಇಂದಿನ ಸಂಖ್ಯೆಯನ್ನೂ ಸೇರಿಸಿದರೆ ರಾಜ್ಯದಲ್ಲಿ ಒಟ್ಟು 49,602 ಮಂದಿ ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದ್ರಲ್ಲಿ ಸಿಂಹಪಾಲು ಬೆಂಗಳೂರು ನಗರದ್ದೇ ಆಗಿದೆ. ಬೆಂಗಳೂರಿನಲ್ಲಿ ನಲವತ್ತು ಸಾವಿರಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ.

Share Post