Districts

ಕೋವಿಡ್‌ ಕೇರ್‌ ಸೆಂಟರ್‌ ಗೆ ಸಚಿವ ನಾರಾಯಣ್‌ ಗೌಡ

ಮಂಡ್ಯ: ರಾಜ್ಯದಲ್ಲಿ ಕೊರೋನಾ ಹಾಗೂ ರೂಪಾಂತರಿ ತಳಿ ಒಮಿಕ್ರಾನ್‌ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಇದನ್ನು ನಿಯಂತ್ರಿಸಲು ಸರ್ಕಾರ ಕೆಲ ನಿರ್ಬಂಧ ಹೇರಿದೆ. ಇನ್ನು ಎಲ್ಲ ಜಿಲ್ಲೆಯಲ್ಲೂ ಸಹ ಕೋವಿಡ್‌  ಹತೋಟಿಗೆ ತರಲು ಕಠಿಣ ಕ್ರಮ ಜಾರಿಮಾಡಿದೆ. ಇದೀಗ ಕೋವಿಡ್ ಕೇರ್ ಸೆಂಟರ್ ಗೆ ಸಚಿವ ನಾರಾಯಣ್ ಗೌಡ ಭೇಟಿ ನೀಡಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರಿನ ಕೋವಿಡ್ ಕೇರ್ ಗೆ ಸಚಿವ ನಾರಾಯಣ್‌ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಕೋವಿಡ್ ಕೇರ್ ಕೇಂದ್ರಗಳಲ್ಲಿನ ಮೂಲಭೂತ ಸೌಕರ್ಯಗಳ ಬಗ್ಗೆ ಸಿಬ್ಬಂದಿಗಳಿಂದ ಮಾಹಿತಿ ಪಡೆದರು. ಸೋಂಕಿತರಿಂದ ಮೂಲಭೂತ ಸೌಕರ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಈ ವೇಳೆ ಸಚಿವ ನಾರಾಯಣ್‌ ಗೌಡ ಅವರು ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಹಾಗೂ ಸೌಕರ್ಯಗಳ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಚಿವರ ಜೊತೆ ಡಿಎಚ್‌ಓ ಹಾಗೂ ಅಧಿಕಾರಿಗಳು ಸಾಥ್‌ ನೀಡಿದ್ದಾರೆ.

 

Share Post