National

ಫಾತಿಮಾ ಶೇಖ್‌ಗೆ ಗೂಗಲ್‌ ಡೂಡಲ್‌ ಅರ್ಪಣೆ – ಮುಸಲ್ಮಾನ ಸಮುದಾಯದ ಮೊದಲ ಶಿಕ್ಷಕಿ

ಗೂಗಲ್‌ ಇಂದು ತನ್ನ ಡೂಡಲ್‌ ಅನ್ನು ಫಾತಿಮಾ ಶೇಖ್‌ ಅವರಿಗೆ ಅರ್ಪಿಸಿದೆ. ಮುಸಲ್ಮಾನ ಸಮುದಾಯದ ಮೊದಲ ಶಿಕ್ಷಕಿಯಾಗಿದ್ದ ಫಾತಿಮಾ ಶೇಖ್‌ ಅವರು 1848ರಲ್ಲಿ ಬಾಲಕಿಯರಿಗಾಗಿ ಶಾಲೆಯನ್ನು ಆರಂಭಿಸಿದ್ದರು. 1831ರಲ್ಲಿ ಜನವರಿ 9 ರಂದು ಪುಣೆಯಲ್ಲಿ ಜನಿಸಿದ ಫಾತಿಮ ಸಮಾಜ ಸುಧಾರಕರೆನಿಸಿಕೊಂಡಿದ್ದ ಜ್ಯೋತಿರಾವ್‌ ಮತ್ತು ಸಾವಿತ್ರಿಬಾಯಿ ಪುಲೆ ಅವರ ಸಹ ಪ್ರವರ್ತಕರಾಗಿದ್ದರು.

ಭಾರತೀಯ ಜಾತಿ ವ್ಯವಸ್ಥೆಗಳ ವಿರುದ್ಧ ನಿಂತಿದ್ದ ಫಾತಿಮಾ ದೀನ ದಲಿತರು, ಕೆಳ ಜಾತಿಗಳ ಮನೆ ಮನೆಗೆ ಹೋಗಿ ಶಿಕ್ಷಣದ ಮಹತ್ವ ಸಾರಿದ್ದರು. ಫಾತಿಮ ಅವರ ಈ ಕೆಲಸಕ್ಕೆ ತೀವ್ರ ವಿರೋಧ ಇದ್ದರೂ ಅವರು ಜಗ್ಗಲಿಲ್ಲ.

2014ರಲ್ಲಿ ಭಾರತ ಸರ್ಕಾರವು ಉರ್ದು ಪಠ್ಯಪುಸ್ತಕಗಳಲ್ಲಿ ಫಾತಿಮಾ ಅವರ ಸಾಧನೆಗಳನ್ನು ಸೇರಿಸುವ ಮೂಲಕ ಅವರ ಕಾರ್ಯಗಳನ್ನು ಮತ್ತಷ್ಟು ಪರಿಚಯಿಸುವ ಕೆಲಸ ಮಾಡಿತ್ತು.

ಸ್ತ್ರೀವಾದಿ, ಮುಸ್ಲಿಂ ಮೊದಲ ಶಿಕ್ಷಕಿ ಆದ ಫಾತಿಮಾ ಅವರಿಗೆ ಗೂಗಲ ಡೂಡಲ್‌ ಅನ್ನು ಸಮರ್ಪಿಸಿರುವುದು ನಿಜಕ್ಕೂ ದೊಡ್ಡ ಗೌರವ .

Share Post