ಪಂಜಾಬ್‌ಗೆ ಹೊಸ ಡಿಜಿಪಿ : ಅಧಿಕಾರ ವಹಿಸಿಕೊಂಡ ವಿ.ಕೆ.ಭಾವ್ರಾ
ಪಂಜಾಬ್: ಪ್ರಧಾನಿ ನರೇಂದ್ರ ಮೋದಿಯವರಿಗೆ ಭದ್ರತಾ ಲೋಪದ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾದ ಬೆನ್ನಲ್ಲೇ ಪಂಜಾಬ್‌ಗೆ ನೂತನ ಪೊಲೀಸ್ ಮಹಾನಿರ್ದೇಶಕರಾಗಿ (ಡಿಜಿಪಿ) ವಿಕೆ ಭಾವ್ರ ಅವರನ್ನು ನೇಮಕ ಮಾಡಿದ್ದಾರೆ. ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ ಅಂತಿಮಗೊಳಿಸಿದ್ದ ಮೂರು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು, ಅದರಲ್ಲಿ ಹಿರಿಯ ಈಪಿಎಸ್ ಅಧಿಕಾರಿಯಾದ ವಿಕೆ ಭಾವ್ರ ಅವರನ್ನು ಡಿಜಿಪಿಯಾಗಿ ಅಂತಿಮವಾಗಿ ಆಯ್ಕೆ ಮಾಡಲಾಯ್ತು. ಮೂವರ ಪಟ್ಟಿಯಲ್ಲಿ ದಿನಕರ್ ಗುಪ್ತಾ ಮತ್ತು ಪ್ರಬೋಧ್ ಕುಮಾರ್ ಹೆಸರು ಕೂಡ ಇತ್ತು.
ಪಂಜಾಬ್ ಸರ್ಕಾರ ಮೂರು ತಿಂಗಳಲ್ಲಿ ಮೂವರು ಡಿಜಿಪಿಗಳನ್ನು ಬದಲಾವಣೆ ಮಾಡಲಾಗಿದೆ. ಚುನಾವಣಾ ಆಯೋಗ ಫೆಬ್ರವರಿ ೧೪ ರಂದು ಚುನಾವಣೆಯನ್ನು ಘೋಷಣೆ ಮಾಡಿದೆ. ಇದಕ್ಕೂ ಮೊದಲೇ ಭದ್ರತಾ ವೈಫಲ್ಯ ಪ್ರಶ್ನಿಸಿ ನಿರ್ಗಮಿತ ಡಿಜಿಪಿ ಸಿದ್ದಾರ್ಥ್ ಚಟ್ಟೋಪಾಧ್ಯಾಯ ಜಾಗಕ್ಕೆ ನೂತನ ಡಿಜಿಪಿಯನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಪ್ರಸ್ತುತ ನೇಮಕವಾಗಿರುವ ಡಿಜಿಪಿ ವಿಕೆ ಭಾವ್ರ ಅವರು ಎರಡು ವರ್ಷಗಳವರೆಗೆ ಅಧಿಕಾರದಲ್ಲಿ ಇರಲಿದ್ದಾರೆ ಎಂಬ ಮಾಹಿತಿಯಿದೆ.