Sports

ಶ್ರೇಯಸ್‌ ಮತ್ತು ಹನುಮ ವಿಹಾರಿ ಸ್ವಲ್ಪ ಕಾಯಬೇಕು :‌ ರಾಹುಲ್ ಡ್ರಾವಿಡ್

ಜೋಹಾನ್ಸ್‌ಬರ್ಗ್‌ : ಭಾರತ ಕ್ರಿಕೆಟ್‌ ತಂಡದಲ್ಲಿ ಆಟಗಾರರು ತುಂಬಿ ತುಳುಕುತ್ತಿದ್ದಾರೆ. ಒಂದೊಂದು ಕ್ರಮಾಂಕಕ್ಕೂ ಕನಿಷ್ಠ ಎರಡು ಆಪ್ಷನ್‌ ಆದರೂ ಇದೆ. ಇಷ್ಟು ಬಲಿಷ್ಠವಾದ ತಂಡ ರಚಿಸಲು ರಾಹುಲ್‌ ಡ್ರಾವಿಡ್‌ ಅವರೇ ಕಾರಣ. ಅಂಡರ್‌ 19 ತಂಡದ ಗರಡಿಯಲ್ಲಿ ಪ್ರತಿ ಆಟಗಾರರನ್ನು ಡ್ರಾವಿಡ್‌ ಪಳಗಿಸಿದ್ದಾರೆ. ಇದನ್ನು ಅರಿತ ಬಿಸಿಸಿಐ ರಾಹುಲ್‌ ಅವರಿಗೆ ಟೀಂ ಇಂಡಿಯಾದ ಮುಖ್ಯ ಕೋಚ್‌ ಹುದ್ದೆಗೆ ಆಹ್ವಾನಿಸಿತ್ತು.

ಈಗ ಡ್ರಾವಿಡ್‌ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಟೆಸ್ಟ್‌ ಸರಣಿಯಲ್ಲಿ ಒಂದು ಗೆಲುವು ಮತ್ತೊಂದು ಸೋಲು ಏದುರಾಗಿದೆ. ಈ ನಡುವೆ ಮಾತನಾಡಿದ ರಾಹುಲ್‌ ಶ್ರೇಯಸ್‌ ಮತ್ತು ಹನುಮ ವಿಹಾರಿ ಅವರಿಗೆ ಅವಕಾಶ ಸಿಕ್ಕಾಗೆಲ್ಲಾ ಚೆನ್ನಾಗಿ ಆಡಿದ್ದಾರೆ. ಆದರೆ ಅವರು ಇನ್ನು ಸ್ವಲ್ಪ ಕಾಯಬೇಕಿದೆ. ವಿರಾಟ್‌ ಕೊಹ್ಲಿ ಅವರಿಗೆ ಬೆನ್ನು ನೋವು ಮತ್ತು ಶ್ರೇಯಸ್‌ ಅಯ್ಯರ್‌ ಅವರಿಗೆ ಹೊಟ್ಟೆಯಲ್ಲಿ ಬೇನೆ ಕಾಣಿಸಿಕೊಂಡ ಕಾರಣ ಹನುಮ ವಿಹಾರಿಗೆ ಅವಕಾಶ ದೊರೆಯಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಹನುಮ ಅವರ ೪೦ರನ್‌ ಸಹಾಯದಿಂದ ಭಾರತ 200ರ ಗಡಿ ದಾಟಲು ಸಾಧ್ಯವಾಗಿದ್ದು ಎಂದು ಡ್ರಾವಿಡ್‌ ಹೇಳಿದ್ದಾರೆ.

ಈ ಸಮಯದಲ್ಲಿ ಅಜಿಂಕ್ಯ ಮತ್ತು ಪುಜಾರಾ ಅವರಿಗೆ ನಾವು ಒತ್ತು ನೀಡಬೇಕಿದೆ. ಹನುಮಾ ವಿಹಾರಿ ಮತ್ತು ಶ್ರೇಯಸ್‌ ಅಯ್ಯರ್‌ ಅವರಿಗೆ ಮುಂದೆ ಹೆಚ್ಚು ಅವಕಾಶಗಳು ಸಿಗಲಿದೆ ಅಲ್ಲಿಯವರೆಗು ಸ್ವಲ್ಪ ಕಾಯಬೇಕು.

ಇನ್ನು ರಿಷಬ್‌ ಪಂತ್‌ ಔಟಾದ ಬಗ್ಗೆ ಪ್ರಶ್ನಿಸಿದಾಗ, ರಿಷಬ್‌ ಪಂತ್‌ ಬಳಿ ಮಾತನಾಡುವ ಅಗತ್ಯ ಇದೆ ಎಂದು ಭಾರತದ ಕೋಚ್‌ ರಾಹುಲ್‌ ತಿಳಿಸಿದ್ದಾರೆ.

ಇನ್ನು ಕೊನೆಯ ಟೆಸ್ಟ್‌ ಇದೇ 11ರಿಂದ ಶುರು ಆಗಲಿದ್ದು, ಮೊಹಮ್ಮದ್ ಸಿರಾಜ್‌ ಅಲಭ್ಯರಾಗಿದ್ದಾರೆ. ಮಂಡಿ ನೋವಿನಿಂದ ಸಿರಾಜ್‌ ಬಳಲುತ್ತಿದ್ದಾರೆ ಎಂದು ರಾಹುಲ್‌ ತಿಳಿಸಿದ್ದಾರೆ.

Share Post