ದೆಹಲಿಯಲ್ಲಿ ಅಕಾಲಿಕ ಮಳೆ; ಕುಂಭದ್ರೋಣ ಮಳೆಗೆ ಮುಳುಗಿದ ರಾಷ್ಟ್ರ ರಾಜಧಾನಿ
ನವದೆಹಲಿ: ಮಳೆಗಾಲದ ಮುಗಿದು ಚಳಿಗಾಲ ಆರಂಭವಾಗಿ ಒಂದು ತಿಂಗಳೇ ಆಗಿದೆ. ಆದ್ರೆ, ಈಗಲೂ ಮಳೆಯ ಅವಾಂತರಗಳು ಸೃಷ್ಟಿಯಾಗುತ್ತಲೇ ಇವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ರಾತ್ರಿ ಭಾರೀ ಮಳೆ ಸುರಿದಿದೆ. ಕುಂಭದ್ರೋಣ ಮಳೆಗೆ ದೆಹಲಿಯ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ರಸ್ತೆಗಳಲ್ಲಿ ಕೂಡಾ ಸೊಂಟ ಮಟ್ಟದವರೆಗೆ ನೀರು ಹರಿದಿದ್ದರಿಂದ ವಾಹನ ಸವಾರರು ಪರದಾಡಬೇಕಾಯಿತು. ಬೆಳಗ್ಗೆಯಾದರೂ ರಸ್ತೆಗಳಲ್ಲಿ ನೀರು ಹರಿಯುತ್ತಲೇ ಇತ್ತು.
ದೆಹಲಿ, ಗುರುಗ್ರಾಮ, ಫರೀದಾಬಾದ್, ಮನೇಸರ್, ಕರ್ನಾಲ್, ಸೋನಿಪತ್, ಝಜ್ಜರ್ ಸೇರಿದಂತೆ ಹಲವು ಕಡೆ ಭಾರಿ ಮಳೆಯಾಗಿದೆ. ಬದರಪುರ ಗಡಿಯ ಪ್ರಹ್ಲಾದಪರ್ ಬಳಿಯ ಅಂಡರ್ ಪಾಸ್ ಸೇತುವೆಯ ಕೆಳಗೆ ಮಳೆ ನೀರು ಹೆಚ್ಚಾಗಿ ನಿಂತಿದ್ದರಿಂದ ವಾಹನಗಳ ಓಡಾಟಕ್ಕೆ ಕಷ್ಟವಾಗಿತ್ತು. ಸೇತುವೆ ಕೆಳಗೆ ಟ್ರಕ್ ಒಂದು ಸಿಲುಕಿಕೊಂಡಿತ್ತು. ಟ್ರಕ್ನ್ನು ಹೊರತೆಗೆಯಲು ಹರಸಾಹಸ ಪಡಬೇಕಾಯಿತು.
ಇನ್ನು ಜನವರಿ 9 ರವರೆಗೂ ರಾಷ್ಟ್ರ ರಾಜಧಾನಿಯಲ್ಲಿ ಮೋಡ ಕವಿದ ವಾತಾವರಣವಿದ್ದು, ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಒಂದು ಕೊರೊನಾ ಹೆಚ್ಚಾಗುತ್ತಿದೆ. ಜನರಿಗೆ ಶೀತ, ಕೆಮ್ಮು, ಉಸಿರಾಟದ ತೊಂದರೆ ಹೆಚ್ಚಾಗುತ್ತಿದೆ. ಹೀಗಿರುವಾ ಅಕಾಲಿಕ ಮಳೆಯಾಗಿರುವುದು ಆತಂಕ್ಕೆ ಎಡೆಮಾಡಿಕೊಟ್ಟಿದೆ.