ಲಸಿಕೆ ಪಡೆದವರಿಗೆ ಗ್ರೀನ್ ಪಾಸ್ ವಿತರಿಸಲು ಸರ್ಕಾರ ಚಿಂತನೆ
ಬೆಂಗಳೂರು : ಕೋವಿಡ್ ಹೆಚ್ಚಳದ ಹಿನ್ನೆಲೆ ಕೆಲವು ಸೇವೆಗಳಿಗೆ ನಿರ್ಬಂಧ ಹೇರಲಾಗ್ತಿದೆ. ಇನ್ನು ಕೆಲವು ಸಾರ್ವಜನಿಕ ಸ್ಥಳದಲ್ಲಿ ಕೋವಿಡ್ ಸರ್ಟಿಫಿಕೇಟ್ ತೋರಿಸಿದವರಿಗೆ ಮಾತ್ರ ಪ್ರವೇಶ ನೀಡಲಾಗ್ತಿದೆ. ಇದನ್ನು ಅರಿತ ಸರ್ಕಾರ ಸಾರ್ವಜನಿಕರಿಗೆ ಗ್ರೀನ್ ಪಾಸ್ ನೀಡಲು ಚಿಂತನೆ ನಡೆಸಿದೆ.
ಏನಿದು ಗ್ರೀನ್ ಕಾರ್ಡ್ ?
ಸರ್ಕಾರ ಕಚೇರಿಗಳು, ಹೋಟೆಲ್ , ರೆಸ್ಟೋರೆಂಟ್ಸ್, ಮಾಲ್ , ಪಬ್, ಸೇರಿದಂತೆ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್ ಸರ್ಟಿಫಿಕೇಟ್ ತೋರಿಸಿದರಷ್ಟೇ ಪ್ರವೇಶ ನೀಡಲಾಗ್ತಿದೆ. ಎರಡು ಡೋಸ್ ವ್ಯಾಕ್ಸಿನ್ ಹಾಕಿಸಿಕೊಂಡವರು ತಮ್ಮ ಸರ್ಟಿಫಿಕೇಟ್ ತೋರಿಸಿ ಪ್ರವೇಶ ಪಡೆಯಬಹುದಾಗಿದೆ.
ಎರಡು ಡೋಸ್ ವ್ಯಾಕ್ಸಿನ್ ಪಡೆದವರಿಗೆ ಗ್ರೀನ್ ಕಾರ್ಡ್ ನೀಡಲು ಸರ್ಕಾರ ಚಿಂತಿಸಿದೆ. ಇದರಿಂದ ಸಾರ್ವಜನಿಕರು ಎಲ್ಲೀಯೇ ಹೋದರೂ ಈ ಪಾಸ್ / ಯುನಿವರ್ಸಲ್ ಕಾರ್ಡ್ ಅನ್ನು ತೋರಿಸಿ ಪ್ರವೇಶ ಪಡೆಯಬಹುದಾಗಿದೆ. ಇದರಿಂದ ಕಾರ್ಯ ನಿರ್ವಹಿಸುವಿಕೆ ಸುಲಭವಾಗಲಿದೆ ಎಂದು ಸರ್ಕಾರ ಯೋಚಿಸಿದೆ.
ಡಾ ಕೆ ಸುಧಾಕರ್ ಅವರು ಈ ಯುನಿವರ್ಸಲ್ ಕಾರ್ಡ್/ಗ್ರೀನ್ ಕಾರ್ಡ್ ಬಗ್ಗೆ ಮಾತನಾಡಿ, ತಜ್ಞರು ಮತ್ತು ಐಟಿ ಕಂಪನಿಗಳ ಜತೆ ಸಮಾಲೋಚನೆ ನಡೆಸಿ ನಂತರ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಇದರಿಂದ ಕೋವಿಡ್ ನಿಯಂತ್ರಿಸಲು ಮತ್ತು ಸಾರ್ವಜನಿಕರ ಹಿತದೃಷ್ಟಿಯನ್ನು ಕಾಪಾಡಲು ಅನುಕೂಲವಾಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.