ಧರ್ಮಸ್ಥಳದ ಕೆಲವು ಆನ್‌ಲೈನ್ ಸೇವೆಗಳು ರದ್ದು
ಉಜಿರೆ : ಕೋವಿಡ್ ಹೆಚ್ಚಳದ ಹಿನ್ನೆಲೆಯಲ್ಲಿ ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಗಳನ್ನು ಧರ್ಮಸ್ಥಳದಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಾಗ್ತಿದೆ. ಮುಂಚೆ ಆನ್‌ಲೈನ್ ಮೂಲಕ ಕೆಲವು ಸೇವೆಗಳನ್ನು ಕಾಯ್ದಿರಿಸುವ ಅವಕಾಶ ಇತ್ತು ಈಗ ಅದನ್ನು ಸ್ಥಗಿತಗೊಳಿಸಲಾಗಿದೆ. ತುಲಾಬಾರ, ಉತ್ಸವ, ಪೂಜೆ, ರೂಮ್ ಕಾಯ್ದಿರಿಸುವಿಕೆ ಇನ್ನು ಮುಂತಾದ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಇನ್ನು ವೀಕೆಂಡ್ ಲಾಕ್‌ಡೌನ್ ಸಂಬಂಧಿಸಿದ ಹಾಗೆ ದೇವಸ್ಥಾನವು ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡುತ್ತಿದೆ. ವಾರಾಂತ್ಯಗಳಲ್ಲಿ ಮಂಜುನಾಥ ಸ್ವಾಮಿಗೆ ಪೂಜಾ ವಿಧಿ ವಿಧಾನಗಳು ಜರುಗುತ್ತವೆ ಹೊರತು ಭಕ್ತರಿಗೆ ಅವಕಾಶ ಇರುವುದಿಲ್ಲ.
ಸೋಮವಾರದಿಂದ ಶುಕ್ರವಾರ ದೇವರ ದರ್ಶನಕ್ಕೆ ಬರುವ ಪ್ರತಿಯೊಬ್ಬರೂ ಡಬಲ್ ಡೋಸ್ ವ್ಯಾಕ್ಸಿನ್ ಹಾಕಿಸಿರಬೇಕು ಎಂದು ದೇವಸ್ಥಾನ ಮಂಡಳಿ ತಿಳಿಸಿದೆ. ಸಾಮಾಜಿಕ ಅಂತರ, ಮಾಸ್ಕ್ ಸೇರಿದಂತೆ ಎಲ್ಲಾ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಸೂಚಿಸಿದೆ.