Crime

ನಕಲಿ ನೋಟುಗಳ ಮುದ್ರಣ; ಏಳು ಆರೋಪಿಗಳು ಅರೆಸ್ಟ್‌

ಗಾಜಿಯಾಬಾದ್‌: ನಕಲಿ ನೋಟುಗಳನ್ನು ಮುದ್ರಿಣ ಚಲಾವಣೆ ಮಾಡುತ್ತಿದ್ದ ಏಳು ಆರೋಪಿಗಳನ್ನು ಗಾಜಿಯಾಬಾದ್‌ ಪೊಲೀಸರು ಬಂಧಿಸಿದ್ದಾರೆ. ಅಜಾದ್‌ ಎಂಬ ವ್ಯಕ್ತಿ ಒಂದಷ್ಟು ತನ್ನ ಸಹಚರರನ್ನಿಟ್ಟುಕೊಂಡು ಸಾಮಾನ್ಯ ಪ್ರಿಂಟರ್‌ನಲ್ಲಿ ನೋಟುಗಳನ್ನು ಮುದ್ರಣ ಮಾಡುತ್ತಿದ್ದ. ಅವುಗಳನ್ನು ದೆಹಲಿ ಸೇರಿ ಸುತ್ತಮುತ್ತಲ ನಗರಗಳಲ್ಲಿ ಚಲಾವಣೆ ಮಾಡುತ್ತಿದ್ದ. ಈ ವಿಷಯ ತಿಳಿದು ದಾಳಿ ಮಾಡಿದ ಗಾಜಿಯಾಬಾದ್‌ ಪೊಲೀಸರು, ಮಾಲು ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ನೂರು, ಇನ್ನೂರು ಹಾಗೂ ಎರಡು ಸಾವಿರ ರೂಪಾಯಿ ನೋಟುಗಳನ್ನು ಮುದ್ರಿಸುತ್ತಿದ್ದರು. ಕಡಿಮೆ ಬೆಲೆಯ ನೋಟುಗಳನ್ನು ಯಾರೂ ಪರೀಕ್ಷಿಸುವುದಿಲ್ಲ ಹಾಗೂ ಸಣ್ಣ ಪುಟ್ಟ ಅಂಗಡಿಗಳಲ್ಲಿ ಸುಲಭವಾಗಿ ಚಲಾವಣೆ ಮಾಡಬಹುದು ಎಂದು ಅವರು ೧೦೦ ಹಾಗೂ ೨೦೦ ರೂಪಾಯಿ ನೋಟುಗಳನ್ನು ಹೆಚ್ಚಿಗೆ ಮುದ್ರಿಸುತ್ತಿದ್ದರು ಎಂದು ತಿಳಿದುಬಂದಿದೆ.

ಪೊಲೀಸರು ಪ್ರಮುಖ ಆರೋಪಿ ಆಜಾದ್‌, ಆತನ ಸಹಚರರಾದ ಅಲಂ, ರಹ್ಬರ್‌, ಫಾರೂಕ್‌, ಅಬ್ಬಸಿ, ಯೂನಸ್‌, ಸೋನಿ ಹಾಗೂ ಅಮನ್‌ ಎಂಬುವವರನ್ನು ಬಂಧಿಸಿದ್ದಾರೆ.

Share Post