Bengaluru

ನೀರಿಗಾಗಿ ನಡಿಗೆ ಮಾಡಿಯೇ ತೀರುತ್ತೇವೆ: ಡಿ.ಕೆ.ಶಿವಕುಮಾರ್

ಬೆಂಗಳೂರು: ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್‌ ಜನವರಿ 9ರಂದು ಪಾದಯಾತ್ರೆ ನಡೆಸಲಿದ್ದಾರೆ. ಕೊರೊನಾ ಸೋಂಕಿನ ಏರಿಕೆಯಿಂದ ಸರ್ಕಾರ ಪಾದಯಾತ್ರೆ ನಡೆಸದಂತೆ ತಾಕೀತು ಮಾಡಿದೆ. ಆದ್ರೆ. ನಾವು ಸತ್ತರೂ ಸರಿಯೇ ಪಾದಯಾತ್ರೆ ನಿಲ್ಲಸಲ್ಲ ಅಂತಿದಾರೆ ಕಾಂಗ್ರೆಸ್‌ ನಾಯಕರು. ಇದಕ್ಕೆ ಬೇಕಾಗಿರುವ ಸಕಲ ಸಿದ್ದತೆಯನ್ನು ಸಹ ಕೈ ನಾಯಕರು ಮಾಡಿಕೊಂಡಿದ್ದಾರೆ.

ಇತ್ತ ಪಾದಯಾತ್ರೆ ಹತ್ತಿಕ್ಕಲು ಕೊರೊನಾ ತಡೆಗೆ ಸರ್ಕಾರ ವೀಕೆಂಡ್‌ ಕರ್ಫ್ಯೂ ವಿಧಿಸಿದೆ. ಅಷ್ಟೇ ಅಲ್ಲದೆ ಚಾಮರಾಜನಗರದಲ್ಲಿ ಶನಿವಾರ ಮತ್ತು ಭಾನುವಾರ 144ಸೆಕ್ಷನ್‌ ಕೂಡ ಅಲ್ಲಿನ ಜಿಲ್ಲಾಧಿಕಾರಿ ಡಾ. ಗಿರೀಶ್‌ ವಿಧಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಜನ ಸೇರದಂತೆ, ಪ್ರವಾಸಿ ಸ್ಥಳಗಳಿಗೂ ಕೂಡ ನಿರ್ಬಂಧ ವಿಧಿಸಲಾಗಿದೆ ಇದರ ನಡುವೆ ಕಾಂಗ್ರೆಸ್‌ ನಾಯಕರ ಪಾದಯಾತ್ರೆ ನಡೆಸಲು ಸಿದ್ಧತೆ ನಡೆಸಿದ್ದಾರೆ.

ಟ್ವಿಟ್ಟರ್‌ನಲ್ಲಿ ಪಾದಯಾತ್ರೆ ಸಂಬಂಧ ಎಲ್ಲವೂ ರೆಡಿಯಾಗಿದೆ ಎಂದು ಡಿ.ಕೆ.ಶುವಕುಮಾರ್‌ ಪೋಸ್ಟ್‌ ಹಾಕಿದ್ದಾರೆ. ಪಾದಯಾತ್ರೆಗೆ ಎಲ್ಲವೂ ರೆಡಿ ʻಮಾಸ್ಕ್‌ ಹೀರೋಗಳ ಪಡೆ ಕೂಡʼ ಎಂದು ಬರೆದುಕೊಂಡಿದ್ದಾರೆ. ಕೋವಿಡ್‌ ನಿಯಮಗಳನ್ನು ಪಾಲಿಸಿಯೇ ಪಾದಯಾತ್ರೆ ಮಾಡುವುದಾಗಿ ಡಿಕೆಶಿ ತಿಳಿಸಿದ್ದಾರೆ.  ಮೇಕೆದಾಟು ಎಂಬ ಪದವನ್ನು ಮುದ್ರಿಸಿರುವ ಮಾಸ್ಕ್‌ ಮತ್ತು ಟೋಪಿ ಧರಿಸಿ, #ನಮ್ಮ ನೀರು ನಮ್ಮ ಹಕ್ಕು ಎಂದು ಟ್ವೀಟ್‌ ಮಾಡಿದ್ದಾರೆ.

 

 

Share Post