Bengaluru

ಲಾಕ್‌ಡೌನ್‌ನಿಂದ ನಷ್ಟಕ್ಕೊಳಗಾದವರ ಗೋಳು ಕೇಳೋರು ಯಾರು?

ಬೆಂಗಳೂರು:  ಸರಾಕರ ಏನೋ ಜನರ ಆರೋಗ್ಯ ಮುಖ್ಯ ಎಂದು ನೈಟ್‌ ಕರ್ಫ್ಯೂ, ವೀಕೆಂಡ್‌ ಕರ್ಫ್ಯೂಗಳನ್ನು ಜಾರಿ ಮಾಡಿದೆ. ಆದರೆ ಇದರ ನೇರ ಹೊಡೆತ ಬಿದ್ದಿದ್ದು ಸಾಮಾನ್ಯ ಜನರಿಗೆ. ಕೆಲಸ ಮಾಡಿದ್ರೆ ಮಾತ್ರ ಆ ದಿನದ ಊಟ ನಡೆಯುತ್ತೆ ಎನ್ನುವವರ ಗೋಳು ಹೇಳತೀರದಂತಾಗಿದೆ. ವ್ಯಾಪಾರವಿಲ್ಲದೆ, ಜನರಿಲ್ಲದೆ ನಮ್ಮ ಬದುಕುನ ಹೇಗೆ ಎಂಬ ಪ್ರಶ್ನೆಯನ್ನು ಸರ್ಕಾರಕ್ಕೆ ಹಾಕಿದ್ದಾರೆ.

ಆಟೋ ಡ್ರೈವರ್‌, ಓಲಾ-ಊಬರ್:‌ ಸಿಲಿಕಾನ್‌ ಸಿಟಿಯಲ್ಲಿ ಅರ್ಧದಷ್ಟು ಜನ ಆಟೋ, ಓಲಾ-ಊಬರ್‌ ನಂಬಿಕೊಂಡು ಜೀವನ ಸಾಗಿಸುವವರೇ ಹೆಚ್ಚು. ಹಳ್ಳಿಗಳಿಂದ ಬಂದು ಸಾಲ-ಸೋಲ ಮಾಡಿ ಕಾರು ಆಟೋ ಖರೀದಿ ಮಾಡಿ ಜೀವ ಮಾಡ್ತಿದ್ದಾರೆ. ಹೀಗಿರುವಾಗ ಸರ್ಕಾರದ ಈ ನಿರ್ಧಾರದಿಂದ ಕೆಂಗೆಟ್ಟಿದ್ದಾರೆ. ಜನರಿಲ್ಲದೆ ನಾವು ರಸ್ತೆಗಿಳಿದು ಪ್ರಯೀಓಜನ ಏನು. ದಿನದ ಆಟೋ ಬಾಡಿಗೆ ಎಲ್ಲಿಂದ ಕಟ್ಟಬೇಕು. ಹೆಂಡತಿ-ಮಕ್ಕಳನ್ನು ಸಾಕುವುದು ಹೇಗೆ ಅಂತ ಆಟೋ ಡ್ರೈವರ್ಸ್‌ ಕೇಳಿದ್ರೆ, ಲೋನ್‌ ಕಟ್ಟಿಲ್ಲ ಅಂದ್ರೆ  ಫೈನಾನ್ಸ್‌ನವರು ಕಾರು ಸೀಜ್‌ ಮಾಡ್ತಾರೆ. ಮುಂದೆ ನಾವು ಬದುಕು ನಡೆಸುವುದ ಹೇಗೆ? ಪೆಟ್ರೋಲ್‌, ಡಿಸೇಲ್‌ ಬೆಲೆ ಗಗನಕ್ಕೇರಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಡ್ರೈವರ್‌ಗಳು.

ಹೂವಿನ ವ್ಯಾಪಾರಿಗಳು: ಇವರ ಬದುಕಂತೂ ದುಸ್ಥರವಾಗಿದೆ. ಹೂವು ಒಂದು ಅಥವಾ ಎರಡು ದಿನ ಇರುವುದೇ ಹೆಚ್ಚು ಜನ ಬೀದಿಗೆ ಇಳಿಯುವುದಿಲ್ಲ ಅಂದ್ರೆ ವ್ಯಾಪಾರ ಮಾಡುವುದು ಹೇಗೆ ಅಂತಿದ್ದಾರೆ ವ್ಯಾಪಾರಸ್ತರು. ಕಳೆದ ಲಾಕ್‌ಡೌನ್‌ ನಿಂದಲೇ ನಾವು ಸುಧಾರಿಸಿಲ್ಲ ಸರ್ಕಾರ ಹೀಗೆ ಮತ್ತೆ ಮತ್ತೆ ಬಿಗಿ ನಿಯಮ ಮಾಡ್ತಿದ್ರೆ ನಾವು ಬದುಕಿಗೆ ಹೊಣೆ ಯಾರು ಪ್ರಶ್ನಿಸಿದ್ದಾರೆ.

ಬೀದಿ ಬದಿ ವ್ಯಾಪಾರಸ್ಥರು: ತರಕಾರಿ, ಹಣ್ಣು, ಫಾಸ್ಟ್‌ ಫುಡ್‌ ಸೆಂಟರ್‌, ಫ್ಯಾನ್ಸಿ ಸ್ಟೋರ್‌, ಬೇಕರಿ ಇವರುಗಳ ಪರಿಸ್ಥಿತಿಯೂ ಹೇಳತೀರದಾಗಿದೆ. ಆವತ್ತಿನ ದುಡಿಮೆಯಿಂದ ಜೀವನ ಸಾಗಿಸುವವರು ನಾವು ಶನಿವಾರ, ಭಾನುವಾರವೇ ಜನ ರಜೆಯಿಂದಾಗಿ ರಸ್ತೆಗಿಳಿಯುತ್ತಿದ್ರು. ಈಗ ಇದ್ದಕ್ಕಿದ್ದಂತೆ ಲಾಕ್‌ಡೌನ್‌ ಘೋಷಣೆ ಮಾಡಿದ್ರೆ ನಮ್ಮ ವ್ಯಾಪಾ, ಬದುಕಿನ ಬಗ್ಗೆ ಯಾರಿಗೆ ಪ್ರಶ್ನಿಸಬೇಕು ಅಂತ ತಮ್ಮ ಅಳಲನ್ನು ತೋಡಿಕೊಳ್ತಿದಾರೆ.

ಇವರಷ್ಟೇ ಅಲ್ಲ ಹೊಟೇಲ್‌ನಲ್ಲಿ ಕೆಲಸ ಮಾಡುವವರು ಕೆಲಸ ಇಲ್ಲದೆ ಊರುಗಳಿಗೆ ತೆರಳುವ ಪರಿಸ್ಥಿತಿ ಬಂದಿದೆ. ಮನೆಯಲ್ಲಿ ಮಗ ಬರ್ತಾನೆ ಹಣ ತರ್ತಾನೆ ಅಂತ ಕಾಯುತ್ತಿರುವ ಹೆತ್ತವರಿಗೆ. ವಿದ್ಯಾಭ್ಯಾಸ ಮಾಡ್ತಿರುವ ಅಣ್ಣ, ತಂಗಿ, ತಮ್ಮ, ಖಾಯಿಲೆಯಿಂದ ಬಳಲುತ್ತಿರುವವರು ಇರ್ತಾರೆ ಇವೆರಲ್ಲರನ್ನು ಕೆಲಸ ಇಲ್ಲದೆ ಹೇಗೆ ನೋಡಿಕೊಳ್ಳುವುದು. ಇದರಿಂದ ಸಾಯುವುದೇ ಮೇಲು ಅಂತ ಕಣ್ಣೀರು ಕಾಹುತ್ತಿದ್ದಾರೆ ಜನ. ಕೊರೊನಾ ಬಂದ್ರೆ ಒಂದೇ ಸಲ ಹೋಗ್ತೀವಿ ಹೀಗೆ ಸಾಲ ಮಾಡಿ ಮತ್ತೆ ಅದನ್ನು ತೀರಿಸಲು ನಾನಾ ಕಷ್ಟಪಡುವ ಬದಲು ಒಂದೇ ಸಲ ಪ್ರಾಣ ಕಳೆದುಕೊಳ್ಳುವುದು ಒಳಿತು ಅಂತ ನೋವನ್ನಿ ಹೊರಹಾಕ್ತಿದಾರೆ ಜನ.

Share Post