ವೀಕೆಂಡ್ ಕರ್ಫ್ಯೂಗೆ ಕಲ್ಯಾಣ ಮಂಟಪ ಖಾಲಿ ಖಾಲಿ
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಹಾವಳಿ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಇದನ್ನು ಹತೋಟಿಗೆ ತರಲು ಸರ್ಕಾರ ಕಠಿಣ ಕ್ರಮ ಜಾರಿ ಮಾಡಿದೆ. ನೈಟ್ ಕರ್ಫ್ಯೂ ಜೊತೆಗೆ ವೀಕೆಂಡ್ ಕರ್ಫ್ಯೂ ಕೂಡ ಜಾರಿ ಮಾಡಲಾಗಿದೆ. ಇದ್ದರಿಂದ ಕಲ್ಯಾಣ ಮಂಟಪಗಳಿಗೆ ಸೆಮಿ ಲಾಕ್ ಡೌನ್ ಬಿಸಿ ತಟ್ಟಿದೆ. ಈಗಾಗಲೇ ಶನಿವಾರ ಮತ್ತು ಭಾನುವಾರ ಮದುವೆಗೆ ಚೌಟ್ರಿಗಳು ಬುಕ್ ಆಗಿತ್ತು. ಈ ಹಿನ್ನೆಲೆ ಕರ್ಫ್ಯೂನಿಂದಾಗಿ ಸದ್ಯ
ಆರ್ಡರ್ ಗಳು ಜನರು ಕ್ಯಾನ್ಸಲ್ ಮಾಡಿದ್ದಾರೆ ಎಂದು ಚೌಟ್ರಿ ಮಾಲಿಕ ಶೇಖರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಾಮಾನ್ಯವಾಗಿ ಒಂದು ಚೌಟ್ರಿ ಬುಕ್ಕಿಂಗ್ಗೆ ಒಂದು ಲಕ್ಷಬೇಕು.ಆದರೆ ನಾವು ಬರಿ ಮೂವತ್ತು ಸಾವಿರಕ್ಕೆ ಮಾತ್ರ ಚೌಟ್ರಿಯನ್ನು ನೀಡಲಾಗುತ್ತದೆ.
ಆದರೂ ಯಾವ ಜನರು ಚೌಟ್ರಿ ಬುಕ್ ಮಾಡಲು ತಯಾರಿ ಇಲ್ಲ. ಜೊತೆಗೆ ಬುಕ್ ಆಗಿರುವ ಆರ್ಡರ್ ಗಳು ಕ್ಯಾನ್ಸಲ್ ಆಗ್ತಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸೆಮಿ ಲಾಕ್ ಡೌನ್ ನಿಂದಾಗಿ ಶನಿವಾರ, ಭಾನುವಾರ, ಆಗಬೇಕಾದ ಕಾರ್ಯಕ್ರಮ ಕ್ಯಾನ್ಸಲ್ ಮಾಡಲಾಗಿದೆ.ಚೌಟ್ರಿ ಬುಕ್ಕಿಂಗ್ ಮಾಡುವ ಜನರೇ ಇಲ್ಲ.ಹೀಗಾಗಿ ಚೌಟ್ರಿನಲ್ಲಿ ಕೆಲಸ ಮಾಡ್ತಿರುವ ಸಿಬ್ಬಂದಿಗೆ ಸಂಬಳ ನೀಡಲು ಆಗುತ್ತಿಲ್ಲ. ಅಂಥ ಕೆಟ್ಟ ಪರಿಸ್ಥಿತಿಯಲ್ಲಿ ನಾವು ಇದ್ದಿವೆ ಎಂದರು.
ಇನ್ನು ಚೌಟ್ರಿ ಗೆ ಟ್ಯಾಕ್ಸ್ ಕಟ್ಟಲು ನೊಟೀಸ್ ಕೂಡ ಬಂದಿದೆ. ಬುಕ್ಕಿಂಗ್ ಇಲ್ಲ ಹೇಗೆ ಟ್ಯಾಕ್ಸ್ ಕಟ್ಟುವುದು ಎನ್ನುವ ಟೆನ್ಷನ್ ನಲ್ಲಿದ್ದೇವೆ. ರಾಜಾಜಿನಗರದಲ್ಲಿ ಇರುವ ಬಹುತೇಕ ಎಲ್ಲ ಚೌಟ್ರಿಗಳದ್ದು ಇದೇ ಪರಿಸ್ಥಿತಿ
ಯಾವ ಚೌಟ್ರಿ ನೋಡಿದ್ರೂ ಫಂಕ್ಷನ್ ಗಳು ಇಲ್ಲಿದೆ ಖಾಲಿ ಖಾಲಿಯಾಗಿವೆ ಎಂದರು.