National

ಇನ್ಮುಂದೆ ಪೋಸ್ಟ್‌ ಆಫೀಸ್‌ ನಲ್ಲಿ ರೈಲು ಟಿಕೆಟ್‌ ಬುಕಿಂಗ್‌

ದೆಹಲಿ: ಪ್ರತಿಯೊಬ್ಬರು ದೂರದ ಊರಿಗೆ ಟ್ರೈನ್‌ ಅಲ್ಲೇ ಪ್ರಯಾಣಿಸುವುದಕ್ಕೆ ಇಷ್ಟಪಡುತ್ತಾರೆ. ಯಾಕೆಂದರೆ ರೈಲು ಅಷ್ಟು ಆರಾಮ್‌ ಆಗಿ ಜರ್ನಿ ಮಾಡುವ ಹಾಗೇ ಬೇರೆ ಯಾವುದರಲ್ಲೂ ಖುಷಿ ಸಿಗುವುದಿಲ್ಲ. ರೈಲುಗಳಲ್ಲಿ ಪ್ರಯಾಣಿಸಿದರೆ ಮನಸಿಗೆ ಖುಷಿ ಕೊಡುವುದರ ಜೊತೆ ಹಣ ಕೂಡ ಉಳಿತಾಯ ಮಾಡಬಹುದು. ಇದರಲ್ಲಿ ಟಿಕೆಟ್‌ ದರ ಕಡಿಮೆ ಇರುತ್ತದೆ. ಮೊದಲು  ರೈಲ್ವೆ ಸ್ಟೇಷನ್‌ ನಲ್ಲಿ ಟಿಕೆಟ್‌ ಕೌಂಟರ್‌ ನಲ್ಲಿ ಟಿಕೆಟ್‌ ಪಡೆಯುವುದಕ್ಕಾಗಿ ಗಂಟೆಗಟ್ಲೇ ಕ್ಯೂ ನಿಂತುಕಕೊಳ್ಳಬೇಕಿತ್ತು. ಈ ವೇಳೆ ಜನರು ನೂಕುನುಗ್ಗಲೂ ಉಂಟಾಗುತ್ತಿತ್ತು. ಆದರೆ ಕೊರೋನಾದಿಂದ ಎಲ್ಲವೂ ಬಂದ್‌ ಆಗಿದೆ. ಅಂದರೆ ಕೊರೋನಾ ಮೊದಲ ಅಲೆಯಲ್ಲೇ ರೈಲ್ವೆ ಸ್ಟೇಷನ್‌ ಗಳಲ್ಲಿ ಟಿಕೆಟ್‌ ಕೌಂಟರ್‌ ಬಂದ್‌ ಮಾಡಿದ್ದಾರೆ. ಇದೀಗ ಎಲ್ಲರೂ ಮೊಬೈಲ್‌ನಲ್ಲಿ ಐಆರ್ ಸಿಟಿಸಿ ಹಾಕಿಕೊಂಡು ಅದರಲ್ಲಿ ಟಿಕೆಟ್‌ ಬುಕ್‌ ಮಾಡಿಕೊಂಡು ರೈಲಿನಲ್ಲಿ ಪ್ರಯಾಣಿಸಬೇಕಿತ್ತು. ಇದ್ದರಿಂದ ತುಂಬಾ ಜನರಿಗೆ ಅನುಕೂಲವಾಗುತ್ತಿತ್ತು. ಆದರೆ ಇದು ಅವಿದ್ಯಾವಂತರಿಗೆ ಗೊತ್ತಾಗುತ್ತಿರಲಿಲ್ಲ. ಹೀಗಾಗಿ ಭಾರತೀಯ ರೈಲ್ವೆ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ಇನ್ಮುಂದೆ ಪ್ರಯಾಣಿಕರು ಪೋಸ್ಟ್‌ ಆಫೀಸ್‌ ನಲ್ಲಿ ರೈಲು ಟಿಕೆಟ್‌ ಬುಕ್‌ ಮಾಡಬಹುದು. ಪ್ರಯಾಣಿಕರ ಸೇವೆಯನ್ನು ಸುಧಾರಿಸುವ ಸಲುವಾಗಿ ರೈಲ್ವೇ ಇಲಾಖೆ ಈ ನಿರ್ಧಾರ ಕೈಗೊಂಡಿದೆ.

Share Post