ಸ್ವಿಮ್ಮಿಂಗ್ ಪೂಲ್ ತಂದ ಆಪತ್ತು
ದೆಹಲಿ: ಸ್ವಿಮ್ಮಿಂಗ್ ಪೂಲ್ ಅಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಸ್ವಿಮಿಂಗ್ ಪೂಲ್ ಇಷ್ಟ ಪಡುತ್ತಾರೆ. ಬೇಸಿಗೆ ರಜೆ ಬಂದರೆ ಸಾಕು ಸ್ವಿಮ್ಮಿಂಗ್ ಪೂಲ್ ತರಬೇತಿಗೆ ಮಕ್ಕಳನ್ನು ಕಳುಹಿಸುತ್ತಾರೆ. ಸಾಕಷ್ಟು ಜನ ಸ್ವಿಮ್ಮಿಂಗ್ನಿಂದ ಎಂಜಾಯ್ ಮಾಡುತ್ತಾರೆ. ಅದು ಜನರಿಗೆ ಎಷ್ಟು ಮಜಾ ಕೊಡುತ್ತೊ ಅಷ್ಟೇ ಆಪತ್ತು ಕೂಡ ಇದ್ದೆ ಇರುತ್ತದೆ. ಆದರೆ ಇಲ್ಲೊಬ್ಬಳು ನಟಿ, ಮಾಡಲ್ ಈಜಲು ಹೋಗಿ ಅನಾಹುತಕ್ಕೀಡಾಗಿದ್ದಾಳೆ. ಹೌದು ಆಸ್ಟ್ರೇಲಿಯನ್ ನಟಿ, ಗಾಯಕಿ ಹಾಗೂ ಮಾಡೆಲ್ ಅಲಿ ಸಿಂಪ್ಸನ್ ಸ್ವಿಮ್ಮಿಂಗ್ ಪೂಲ್ ಈಜಲು ಹೋಗಿ ಕುತ್ತಿಗೆ ಪೆಟ್ಟು ಬಿದ್ದಿದೆ. ಸದ್ಯ ಅವರು ಆಸ್ಟ್ರೇಲಿಯಾ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಈ ಬಗ್ಗೆ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ. ಕುತ್ತಿಗೆ ಪೆಟ್ಟು ಬೀಳುವುದರ ಜೊತೆಗೆ ಕೊರೋನಾ ಕೂಡ ದೃಢಪಟ್ಟಿದೆ.
ಸ್ವಿಮ್ಮಿಂಗ್ ಪೂಲ್ ಗೆ ನಾನು ರಭಸವಾಗಿ ಹಾರಿದಾಗ ಕುತ್ತಿಗೆ ಹೊಡೆತ ಬಿದ್ದಿದ್ದೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ಆರಾಮ್ ಆಗಿದ್ದೀನಿ ಎಂದು ಮಾಹಿತಿ ನೀಡಿದ್ದಾರೆ.