Bengaluru

ವೀಕೆಂಡ್‌ ಕರ್ಫ್ಯೂನಲ್ಲಿ ಯಾವುದಕ್ಕೆಲ್ಲ ಅವಕಾಶ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಮತ್ತು ಒಮಿಕ್ರಾನ್‌ ಪ್ರಕರಣ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಒಂದೇ ದಿನದಲ್ಲಿ ೧೪೯ ಒಮಿಕ್ರಾನ್‌ ಪತ್ತೆಯಾಗಿದೆ. ಇದನ್ನು ತಡೆಗಟ್ಟುವ ಸಲುವಾಗಿ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿದ್ದಾರೆ. ಇನ್ನು ಬೆಂಗಳೂರು ನಗರದಲ್ಲಿ ನಾಳೆಯಿಂದ ಕೆಲ ನಿರ್ಬಂಧ ಹೇರಲಾಗಿದೆ. ನಗರದಲ್ಲಿ ಎರಡು ವಾರಗಳ ಕಾಲ ೧ ರಿಂದ ೯ ರವರೆಗೆ ಶಾಲೆಗಳನ್ನು ಬಂದ್‌ ಮಾಡಲಾಗಿದೆ. ೧೦ ಮತ್ತು ೧೨ ತರಗತಿ ಹೊರತು ಪಡಿಸಿ ಉಳಿದ ತರಗತಿಗಳನ್ನು ಆನ್ ಲೈನ್‌  ಮಾಡಲು ನಿರ್ಧರಿಸಿದ್ದಾರೆ. ಜೊತೆಗೆ ರಾಜ್ಯಾದ್ಯಂತ ವೀಕೆಂಡ್‌ ಕರ್ಫ್ಯೂ ವಿಧಿಸಿದೆ. ಇನ್ನು ಮದುವೆಗಳಿಗೆ ಶೇ. ೧೦೦ ಅವಕಾಶ ನೀಡಲಾಗಿದೆ. ದೇವಸ್ಥಾನ ಮತ್ತು ಸಿನಿಮಾ ಮಂದಿರದಲ್ಲಿ ಶೇ. ೫೦  ಅವಕಾಶ ನೀಡಲಾಗಿದೆ. ಇದೀಗ ವೀಕೆಂಡ್‌ ಕರ್ಫ್ಯೂನಲ್ಲಿ ಏನಿರುತ್ತೆ? ಏನಿರುವುದಿಲ್ಲ ? ನೋಡಣ ಬನ್ನಿ
ಏನ್‌ ಇರುತ್ತೆ…!
೧. ತರಕಾರಿ, ದಿನಸಿ ಅಂಗಡಿ, ಹಾಲು, ಮಾಂಸದ ಅಂಗಡಿ, ಪೆಟ್ರೋಲ್‌
೨.ಮೆಡಿಕಲ್‌ ಸ್ಟೋರ್‌ , ಆಸ್ಪತ್ರೆಗಳು
೩. ಹೋಟೆಲ್ ಗಳಲ್ಲಿ ಪರ್ಸಲ್‌
೪.ಐಟಿ ಮತ್ತು ಇತರೆ ಉದ್ಯಮಿಗಳಿಗೆ ಅವಕಾಶ
೬. ವಿಮಾನ, ಬಸ್‌, ರೈಲು ಸಂಚಾರ
೭. ಆಟೋ, ಟ್ಯಾಕ್ಸಿ ಸೇವೆ
ಏನ್‌ ಇರೋಲ್ಲ…!
೧.ಎಲ್ಲ ಉದ್ಯಾನವಗಳು ಬಂದ್‌
೨.ಶಾಲಾ-ಕಾಲೇಜು ಬಂದ್‌
೩.ಯಾವುದೇ ವಾಹನ ಸಂಚಾರವಿಲ್ಲ
೪. ಅನಗತ್ಯ ಓಡಾಟಕ್ಕೆ ಬ್ರೇಕ್‌
೫. ಜಾತ್ರೆ, ಪ್ರತಿಭಟನೆಗಳು ಇರುವುದಿಲ್ಲ

Share Post