Districts

ಮರಳಿ ಗೂಡಿಗೆ: ಹೆತ್ತಮ್ಮನ ಮಡಿಲಿಗೆ ಮಗಳು

ಚಿಕ್ಕಮಗಳೂರು: ಕಣ್ತುಂಬಿ ಬರುವ ಘಟನೆಗಳು ಕೇವಲ ಸಿನಿಮಾದಲ್ಲಿ ಮಾತ್ರವಲ್ಲ, ನಿಜಜೀವನದಲ್ಲೂ ನಡೆಯುತ್ತವೆ. ಅಂತದ್ದೇ ಒಂದು ಘಟನೆ ನಮ್ಮ ಕರ್ನಾಟಕದಲ್ಲೂ ನಡೆದಿದೆ. ಒಂದಲ್ಲ..ಎರಡಲ್ಲ..ಬರೋಬ್ಬರಿ ಇಪ್ಪರೆಡು ವರ್ಷಗಳ ಬಳಿಕ ಮರಳಿ ಗೂಡಿಗೆ ಮಗಳು ಬಂದಿದ್ದಾಳೆ. ಎರಡು ದಶಕಗಳ ಬಳಿಕ ಅಮ್ಮನ ಮಡಿಲು ಸೇರಿದ್ದಾಳೆ ಮಗಳು. ಒಂಭತ್ತು ವರ್ಷವಿದ್ದಾಗ ಕಾಣೆಯಾಗಿದ್ದ ಅಂಜಲಿ ಎಂಬಾಕೆ ತನ್ನ ಅಮ್ಮನನ್ನು ಸೇರಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾ. ಮುದ್ರಮನೆ ಎಂಬಲ್ಲಿ ನಡೆದಿದೆ. ಹೆತ್ತಮ್ಮನನ್ನು ನೋಡಿದ ಕೂಡಲೇ ಓಡಿಬಂದು ಅಪ್ಪಿಕೊಂಡು ಕಣ್ಣೀರಿಟ್ಟ ಘಟನೆ ನಡೆದಿದೆ.

ಮಗಳು ಕಾಣೆಯಾಗಿರುವ ಬಗ್ಗೆ ಹೆತ್ತವರು ದೂರು ದಾಖಲಿಸಿರಲಿಲ್ಲವಂತೆ. ಕೇರಳದ ಮನೆಯೊಂದರಲ್ಲಿ ಕೆಲಸ ಮಾಡ್ಕೊಂಡು ಜೀವನ ಸಾಗಿಸುತ್ತಿದ್ದ ಅಂಜಲಿ ಅಲ್ಲಿಯೇ ನೆಲ್ಲಮಣಿ ಸಾಜಿ ಎಂಬುವವರೊಂದಿಗೆ ಸಪ್ತಪದಿ ತುಳಿದಿದ್ದಾರೆ. ಹೆತ್ತವರಿಗಾಗಿ ಮೂರು ವರ್ಷ ಹುಡುಕಾಟ ನಡೆಸಿದ್ದಕ್ಕೆ ಕೊನೆಗೂ ದೇವರು ಕರುಣೆ ತೋರಿದ್ದಾನೆ. ಮೂಡಿಗೆರೆಯ ಮುದ್ರಮನೆಯಲ್ಲಿ ಅಂಜಲಿ ಯಾಯಿ ಸಿಕ್ಕಿದ್ದು ಹೆತ್ತವ್ವನನ್ನು ಕಂಡೊಡನೆ ಆಕೆಗೆ ಆದ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಮಗಳ ಚಿಕ್ಕ ವಯಸ್ಸಿಗೇ ಕಾಣೆಯಾದ್ಲು ನಾಲ್ಕು ವರ್ಷದ ಹಿಂದೆ ಪತಿ ಸಾವನ್ನಪ್ಪಿದ್ದ, ಒಂಟಿ ಜೀವನ ನಡೆಸುತ್ತಿದ್ದ ಅಮ್ಮನಿಗೆ ಮಗಳು ಸಿಕ್ಕಿರುವುದು ಹೇಳಲಾರದಷ್ಟು ಸಂತೋಷವಾಗಿದೆಯಂತೆ. ಇಂತಹ ಸಂತೋಷದ ಕ್ಷಣಕ್ಕೆ ಮುದ್ರಮನೆ ಜನ ಸಾಕ್ಷಿಯಾದ್ರು.

Share Post