BengaluruCrime

ಉಪ್ಪು ತಿಂದವ ನೀರು ಕುಡಿಯಲೇ ಬೇಕು:ತಪ್ಪು ಮಾಡಿದ್ಮೇಲೆ ಶಿಕ್ಷೆ ಅನುಭವಿಸಲೇಬೇಕು

ಬೆಂಗಳೂರು: ತಪ್ಪು ಮಾಡಿದ್ಮೇಲೆ ಯಾರಾದ್ರೂ ಸರಿ ಶಿಕ್ಷೆ ಅನುಭವಿಸಲೇಬೇಕು, ಅಷ್ಟು ಸರಿ ತಪ್ಪಿಸಿಕೊಳ್ಳಲು ಸಾಧ್ಯ ಅದು ನಮ್ಮ ಬೆಂಗಳೂರು ಪೊಲೀಸರಿಂದ..ನೋ ವೇ..ಚಾನ್ಸೇ ಇಲ್ಲ. ಸುಲಿಗೆ ಆರೋಪದಡಿ ಬಂಧಿತನಾಗಿದ್ದ ಯುವಕ ತಪ್ಪಿಸಿಕೊಳ್ಳಲು ಯತ್ನಿಸಿದ ವೇಳೆ ಪೊಲೀಸರು ಗುಂಡು ಹಾರಿಸಿರುವ ಘಟನೆ ನಗರದ ತಲಘಟ್ಟಪುರದ ೨ನೇ ಹಂತದಲ್ಲಿ ನಡೆದಿದೆ.

ಡ್ರ್ಯಾಗರ್‌ ತೋರಿಸಿ ಮೊಬೈಲ್‌ ಕದ್ದ ಆರೋಪದಡಿ ಸಿದ್ದಾಪುರ ಪೊಲೀಸ್‌ ಠಾಣೆಯಲ್ಲಿ ಡಿಸೆಂಬರ್‌ ೩೦ ರಂದು ದೂರು ದಾಖಲಾಗಿತ್ತು. ದೂರಿನ ಆಧಾರದ ಮೇಲೆ ಪರ್ವೇಜ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ರು. ಸ್ಥಳ ಪಂಚನಾಮೆಗಾಗಿ ಆರೋಪಿಯನ್ನು ಕರೆದೊಯ್ದಾಗ ಪೊಲೀಸರ ಮೇಲೆಯೇ ಚಾಕುವಿನಿಂದ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ಪರ್ವೇಜ್‌ನ ಕಾಳಿಗೆ ಗುಂಡು ಹಾರಿಸಿದ್ದಾರೆ. ಇನ್ಸ್‌ಪೆಕ್ಟರ್‌ ಆಂತೋಣಿರಾಜ್‌ ಹಾರಿಸಿದ ಗುಂಡೇಟಿಗೆ ಆರೋಪಿ ಆಸ್ಪತ್ರೆ ಪಾಲಾಗಿದ್ದಾನೆ. ಇನ್ನು ಹಲ್ಲೆಯಿಂದ ಗಾಯಗೊಂಡ  ಕಾನ್ಸ್‌ಟೇಬಲ್‌ ಪರಮೇಶ್‌ರನ್ನು ಕೂಡ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Share Post