ಬಾಲಿವುಡ್ ನಿರ್ಮಾಪಕಿ ಎಕ್ತಾ ಕಪೂರ್‌ಗೆ ಕೊರೊನಾ ದೃಢ
ಮೂರನೇ ಅಲೆ ಶುರುವಾಗುತ್ತಿದೆ ಆದಷ್ಟು ಎಚ್ಚರಿಕೆಯಿಂದಿರಿ ಎಂದು ಸರ್ಕಾರಗಳು ಎಚ್ಚರಿಸುತ್ತಲೇ ಇವೆ. ಕೊರೊನಾ ವೈರಸ್ ಸೋಂಕು ಹಲವಾರು ಸೆಲೆಬ್ರಿಟಿಗಳಿಗೆ ತಗುಲಿದೆ. ಬಾಲಿವುಡ್ ಟಾಪ್ ನಿರ್ಮಾಪಕಿ ಎಕ್ತಾ ಕಪೂರ್ ಅವರಿಗೂ ಸೋಂಕು ದೃಢವಾಗಿದೆ.
ತಮಗೆ ಸೋಂಕು ತಗುಲಿರುವ ಬಗ್ಗೆ ಎಕ್ತಾ ಕಪೂರ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ನಾನು ಎಲ್ಲಾ ಸುರಕ್ಷತೆಗಳನ್ನು ಅನುಸರಿಸಿದ ಮೇಲೂ ನನಗೆ ಕೋವಿಡ್ ಸೋಂಕು ತಗುಲಿದೆ. ಇತ್ತೀಚೆಗೆ ನನ್ನ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರೂ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಸೋಂಕಿನ ಕುರಿತು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಸಾಕಷ್ಟು ಅಭಿಮಾನಿಗಳು ಸುರಕ್ಷಿತೆ ವಹಿಸುವಂತೆ ಕಾಮೆಂಟ್ ಮಾಡಿದ್ದಾರೆ.
ತಜ್ಞರ ವರದಿ ಪ್ರಕಾರ ಮಾರ್ಚ್‌ನಲ್ಲಿ ದಿನ ಒಂದಕ್ಕೆ 1.75ಲಕ್ಷಕ್ಕೂ ಅಧಿಕ ಕೇಸ್‌ಗಳು ಬರಲಿವೆ ಎಂದು ಹೇಳಿದ್ದಾರೆ.