ಲಸಿಕೆ ಪಡೆಯುವಂತೆ ತಮಿಳು ಸಿಎಂ ಸ್ಟಾಲಿನ್ ಒತ್ತಾಯ
ಚೆನೈ : ಕೊರೊನಾ ರೂಪಾಂತರಿ ವೈರಸ್ ಓಮಿಕ್ರಾನ್ ಭೀತಿ ಜೊತೆಗೆ ಮೂರನೇ ಅಲೆ ಎಲ್ಲೆಡೆ ವ್ಯಾಪಿಸುತ್ತಿರುವ ಸೂಚನೆ ಸಿಕ್ಕಿದೆ. ತಜ್ಞರ ವರದಿ ಪ್ರಕಾರ ಜನವರಿ ಅಂತ್ಯದಿಂದ ಮೂರನೆ ಅಲೆ ಅಬ್ಬರಿಸಲಿದ್ದು ಮಾರ್ಚ್ ಅಂತ್ಯದವರೆಗೂ ಇರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಕಾರಣ ಸ್ಟಾಲಿನ್ ಅವರು ಮಾತನಾಡಿ ಎಲ್ಲರೂ ಕೋವಿಡ್ ನಿಯಮ ಪಾಲನೆ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಲಸಿಕೆ ಪಡೆದವರಿಗಿಂತ ಲಸಿಕೆ ಪಡೆಯದೇ ಇರುವ ಜನರು ಹೆಚ್ಚಾಗಿ ಕೊರೊನಾ ಸೋಂಕಿನಿಂದ ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಜನರು ಲಸಿಕೆ ಪಡೆಯಬೇಕು. ಅದರಲ್ಲಿಯೂ 60 ಚರ್ಷಕ್ಕಿಂತ ಮೇಲ್ಪಟ್ಟವರು ಶೀಘ್ರವೇ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಡೆಲ್ಟಾ ಮತ್ತು ಕೊರೊನಾಗೆ ಹೋಲಿಸಿದರೆ ಓಮಿಕ್ರಾನ್ ವೇಗವಾಗಿ ಹರಡಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಲಸಿಕೆ ಪಡೆದವರಲ್ಲಿ ಸೋಂಕಿನ ಪ್ರಮಾಣ ಕಡಿಮೆ ಇದೆ. ಹೀಗಾಗಿ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ ಎಂದು ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಕೇಳಿಕೊಂಡಿದ್ದಾರೆ.