ಬಿಜೆಪಿ ಅವರೇ ಲಾಕ್ ಡೌನ್ ಸೃಷ್ಟಿ ಮಾಡುತ್ತಿದ್ದಾರೆ- ಡಿ.ಕೆ. ಶಿವಕುಮಾರ್
ಮೈಸೂರು: ಮೇಕೆದಾಟು ಯೋಜನೆ ಆಗ್ರಹಿಸಿ ಇದೇ ತಿಂಗಳು ೯ ರಂದು ಪಾದಯಾತ್ರೆ ಕೈಗೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್
ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದೆ. ಇದಕ್ಕೂ ಮುನ್ನ ಡಿ.ಕೆ.ಶಿವಕುಮಾರ್ ಮೈಸೂರು ಚಾಮುಂಡೇಶ್ವರಿ ದೇವಿ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಳ್ಳೆಯ ಕಾರ್ಯಕ್ಕೂ ಮುನ್ನ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ್ದೇವೆ. ದೇವಿಯ ಶಕ್ತಿಯನ್ನು ನಾವು ನಂಬಿದ್ದೇವೆ ಎಂದರು.
ಇನ್ನು ರಾಜ್ಯದ ಹಿತಕ್ಕಾಗಿ ನಾವು ಪಾದಯಾತ್ರೆ ಮಾಡಿದ್ದೇವೆ. ಜನರಿಗೆ ಕುಡಿಯುವ ನೀರು ಸಿಗಬೇಕು ಎಂಬುದೆ ನಮ್ಮ ಹೋರಾಟ ಉದ್ದೇಶವಾಗಿದೆ. ಆದರೆ ಇದಕ್ಕೆ ಬಿಜೆಪಿ ನಾಯಕರು ಟೀಕೆ ಮಾಡುತ್ತಿದ್ದಾರೆ. ಮಿನಿಸ್ಟರ್ ಗಳು ಏನೇನೋ ಮಾತನಾಡುತ್ತಿದ್ದಾರೆ. ಈ ಟೀಕೆ ಮಾಡುವವರಿಗೆ ಒಳ್ಳೆಯದಾಗಲಿ ಎಂದರು.
ಇನ್ನು ವಾಜಪೇಯಿ ಕಾಲದಲ್ಲೇ ಅಡ್ವಾಣಿ ರಥಯಾತ್ರೆ ಮಾಡಿದರು. ಇದೀಗ ಅವರು ಗಿಮಿಕ್ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.
ಈ ಹಿಂದೆ ಹೆಚ್. ಡಿ. ದೇವೇಗೌಡರು ಸಾಕಷ್ಟು ಯಾತ್ರೆ ಮಾಡಿದ್ದಾರೆ. ಕುಮಾರಸ್ವಾಮಿಯವರೆ ೫ ತಂಡದೊಂದಿಗೆ ಯಾತ್ರೆ ಮಾಡುತ್ತೀವಿ ಎಂದಿದ್ದಾರೆ. ಇದಕ್ಕೆಲ್ಲ ಏನೆಂದು ಹೇಳಬೇಕು ಎಂದು ಡಿ.ಕೆ. ಶಿವಕುಮಾರ್ ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಲಾಕ್ ಡೌನ್ ಕುರಿತು ಮಾತನಾಡಿದ ಅವರು, ಬಿಜೆಪಿ ಅವರೇ ಲಾಕ್ ಡೌನ್ ಸೃಷ್ಟಿ ಮಾಡುತ್ತಿದ್ದಾರೆ. ಸುಖಾಸುಮ್ಮನೆ ನಮ್ಮ ಮೇಲೆ ಕೇಸ್ ಆಗುತ್ತಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಎಲ್ಲ ಮದುವೆ ಮತ್ತು ಸಮಾರಂಭಗಳಿಗೆ ಹೋಗುತ್ತಾರೆ. ಆದರೆ ಅವರು ಮೇಲೆ ಯಾವ ಕೇಸ್ ಆಗೋಲ್ಲ, ಉಳಿದವರು ಮೇಲೆ ಹಾಕ್ತಾರೆ ಎಂದು ವಾಗ್ದಾಳಿ ನಡೆಸಿದರು