International

ಪ್ರಾಣಾಪಾಯದಿಂದ ಪಾರಾದ ರೇಹಮ್‌ ಖಾನ್‌ :ಹೇಡಿಗಳ ಸರ್ಕಾರ ಎಂದು ಕಿಡಿ

ಪಾಕಿಸ್ತಾನ: ಪಾಕ್‌ ಪ್ರಧಾನಿ ಇಮ್ರಾನ್ ಖಾನ್‌ ಬೇಜಾವಾಬ್ದಾರಿ ಆಡಳಿತಕ್ಕೆ ಅವರ ಮಾಜಿ ಪತ್ನಿಯೇ ಛೀಮಾರಿ ಹಾಕಿದ್ದಾರೆ. ತಮ್ಮ ಮೇಲೆ ನಡೆದ ಗುಂಡಿನ ದಾಳಿ ಬಗ್ಗೆ ಟ್ವೀಟ್‌ ಮಾಡಿ ಇಮ್ರಾನ್‌ ಸರ್ಕಾರಕ್ಕೆ ಹಿಡಿ ಶಾಪ ಹಾಕಿದ್ದಾರೆ. ಅಂದಹಾಗೆ ರೇಹಮ್‌ ಖಾನ್‌ ತಮ್ಮ ಸೋದರಳಿಯ ವಿವಾಹಕ್ಕೆ ಹಾಜರಾಗಿ ವಾಪಸಾಗುವ ವೇಳೆ ಯಾರೋ ಅಪರಿಚಿತರಿಬ್ಬರು ಬೈಕ್‌ ಮೇಲೆ ಬಂದು ಬಂದೂಕಿನಿಂದ ಗುಂಡಿನ ದಾಳಿ ನಡೆಸಿದ್ರಂತೆ. ರೇಹಮ್‌ ಖಾನ್‌ ಜೊತೆ ಅವರ ಆಪ್ತ ಕಾರ್ಯದರ್ಶಿ ಹಾಗೂ ಕಾರು ಚಾಲಕ ಇರುವುದಾಗಿ ತಿಳಿಸಿದ್ದಾರೆ. ಆದರೆ ದೇವರ ದಯೆ ಯಾರಿಗೂ ಯಾವುದೇ ಅಪಾಯ ಆಗಲಿಲ್ಲ. ಇತ್ತೀಚೆಗಷ್ಟೇ ನಾನು ನನ್ನ ಕಾರನ್ನು ಬದಲಾಯಿಸಿದ್ದೆ ಇಲ್ಲವಾದಲ್ಲಿ ಆ ದಾಳಿಯಿಂದ ಅನಾಹುತ ಮಾತ್ರ ತಪ್ಪುತ್ತಿರಲಿಲ್ಲ ಎಂದು ಟ್ವೀಟ್‌ ಮಾಡಿಕೊಂಡಿದ್ದಾರೆ.

ಇಷ್ಟಕ್ಕೆಲ್ಲಾ ಇಮ್ರಾನ್‌ ಖಾನ್‌ ದುರಾಡಳಿತವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ನೆನಸಿಕೊಂಡರೆ ಸಾಮಾನ್ಯ ಜನರ ಗತಿಯೇನು ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಇಲ್ಲಿ ಯಾರಿಗೂ ರಕ್ಷಣೆಯಿಲ್ಲ. ಇರುವವರೆಲ್ಲಾ ಕೊಲೆಗಡುಕರು, ದುರಾಸೆಬುರುಕರು, ರಣಹೇಡಿಗಳಿದ್ದಾರೆ ಎಂದು ಟ್ವಿಟ್ಟರ್‌ನಲ್ಲಿ ಕಿಡಿಕಾರಿದ್ದಾರೆ. ರೇಹಮ್‌ ಖಾನ್‌ ಖಾಸಗಿ ಟಿವಿ ನಿರೂಪಕರಾಗಿದ್ದ ವೇಳೆ ಇಮ್ರಾನ್‌ ಖಾನ್ರನ್ನು 2014ರಲ್ಗಲಿ ವಿವಾಹವಾಗಿದ್ರು ನಂತರ ಮದುವೆಯಾದ ಒಂದೇ ವರ್ಷಕ್ಕೆ ವಿಚ್ಚೇದನವನ್ನು ಕೂಡ ಪಡೆದಿದ್ರು. ಆಗಿನಿಂದ ಇಮ್ರಾನ್‌ ಖಾನ್‌ರನ್ನು ಜಾತಕವನ್ನ ಜಾಲಾಡುತ್ತಲೇ ಇದ್ದಾರೆ.

Share Post