Districts

ಜನವರಿ ೩ರಿಂದ ಚಿಕ್ಕಮಗಳೂರು- ಬೆಂಗಳೂರು ರೈಲು ಸಂಚಾರ

ಚಿಕ್ಕಮಗಳೂರು: ಪ್ರವಾಸಿ ತಾಣವಾಗಿರುವ ಕಾಫಿನಾಡು ಚಿಕ್ಕಮಗಳೂರಿಂದ ಶಿವಮೊಗ್ಗ ಜನವರಿ ೩ ರಿಂದ ರೈಲುಗಳು ಆರಂಭವಾಗಲಿದೆ. ಕಳೆದ ೨೪ರಂದು ರೈಲು ಸಂಚಾರ ಸ್ಥಗಿತಗೊಂಡಿತ್ತು. ಇದೀಗ ಶೋಭಾ ಕರಂದ್ಲಾಜೆ ಸಂಧಾನದಿಂದ ಕೊನೆಗೂ ಸರ್ಕಾರ ಒಪ್ಪಿಗೆ ನೀಡಿದೆ. ಸ್ಥಗಿತಗೊಂಡಿದ್ದ ಚಿಕ್ಕಮಗಳೂರು- ಬೆಂಗಳೂರು ರೈಲು ಪ್ರಾರಂಭಿಸಿದೆ. ಪ್ರವಾಸಿ ತಾಣವಾಗಿದ್ದರಿಂದ ಜನರಿಗೆ ಓಡಾಡುವುದಕ್ಕೆ ತೊಂದರೆ ಆಗುತ್ತಿತ್ತು. ಪ್ರತಿನಿತ್ಯ ಸಾವಿರಾರು ಜನರಿಗೆ ಪ್ರಯಾಣಕ್ಕೂ, ಕೃಷಿ ಸಂಬಂಧಿತ ಗೂಡ್ಸ್ ರೈಲುಗಳ ಓಡಾಟಕ್ಕೂ ಅನುಕೂಲಕರವಾಗುವಂತಹ ಮಾರ್ಗವಾಗಿದೆ ಎಂದು ರೈಲ್ವೇ ಸಚಿವರಿಗೆ ಹಾಗು ರೈಲ್ವೇ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟ ಸಚಿವರು, ಈ ಹಿಂದೆ ಇಲಾಖೆ ತೆಗೆದುಕೊಂಡ ನಿರ್ಣಯವನ್ನು ವಾಪಾಸು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರು ಕಡೆ ಪ್ರಯಾಣಿಸುವವರಿಗೆ ಕಡೂರು, ಬೀರೂರಲ್ಲಿ ಸಂಪರ್ಕ ನೀಡುವ ಚಿಕ್ಕಮಗಳೂರು ಬಿರೂರು/ಕಡೂರು ಸೇವೆ ಇರಲಿದೆ.

Share Post