Facebook Love : 15 ವರ್ಷದವನ ಜೊತೆ 22ರ ಯುವತಿ ಮದುವೆ
ಕೋಲ್ಕತ್ತಾ : 15 ವರ್ಷದ ಬಾಲಕನೊಂದಿಗೆ 22ರ ಯುವತಿಯೊಬ್ಬಳು ಮದುವೆ ಆಗಿರುವ ಪ್ರಸಂಗ ಬೆಳಕಿಗೆ ಬಂದಿದೆ. ಪಶ್ಚಿಮ ಬಂಗಾಳದ ಶಾಂತಿಪುರದಲ್ಲಿ ಈ ಪ್ರಸಂಗ ನಡೆದಿದೆ.
ಬಾಲಕ ಕೃಷ್ಣನಾಡಿಯಾದ ಪ್ರದೇಶದವನು. ಫೇಸ್ಬುಕ್ನಲ್ಲಿ ಯುವತಿಯನ್ನು ಪರಿಚಯ ಮಾಡಿಕೊಂಡ ಬಾಲಕನಿಗೆ ಹುಡುಗಿ ಮೇಲೆ ಲವ್ ಆಗಿದೆ. ಈಗ ಇಬ್ಬರು ಮದುವೆಯಾಗಿದ್ದಾರೆ.
ಡಿಸೆಂಬರ್ 25ರಂದು ಮನೆಯಿಂದ ಓಡಿ ಹೋಗಿದ್ದ ಇವರು ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡಿದ್ದಾರೆ. ಲೋಕಲ್ ರೈಲಿನಲ್ಲಿ ಶಾಂತಿಪುರಕ್ಕೆ ಬರುತ್ತಿದ್ದ ವೇಳೆ ಅವರ ಮಾತು ಕೇಳಿ ಪ್ರಯಾಣಿಕರಿಗೆ ಅನುಮಾನ ಬಂದು ಚೈಲ್ಡ್ಲೈನ್ಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ರೈಲ್ವೆ ಪೊಲೀಸರು ಇವರನ್ನು ಬಂಧಿಸಿದ್ದಾರೆ. ಇದೀಗ ಇಬ್ಬರನ್ನು ವಶಕ್ಕೆ ಪಡೆದುಕೊಂಡಿರುವ ಶಾಂತಿಪುರ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
ಹುಡುಗ ೧೦ನೇ ಕ್ಲಾಸ್ ಓದುತ್ತಿದ್ದು ಹುಡುಗಿ ಕೆಲಸಕ್ಕೆ ಹೋಗುತ್ತಿದ್ದಾಳೆ ಎಂದು ವರದಿಯಾಗಿದೆ.