ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಕ್ವಿನ್‌ಟನ್ ಡಿ ಕಾಕ್
ಸೆಂಚೂರಿಯನ್ : ದ.ಆಫ್ರಿಕಾದ ವಿಕೇಟ್ ಕೀಪರ್ ಕ್ವಿನ್‌ಟನ್ ಡಿ ಕಾಕ್ ಕೇವಲ 29ನೇ ವಯಸ್ಸಿಗೆ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ನಿರ್ಧಾರ ಪ್ರಕಟಿಸುವ ವೇಳೆ ಮಾತನಾಡಿದ ಕ್ವಿಂಟನ್ ಡಿ ಕಾಕ್, ಈ ನಿರ್ಧಾರ ಅತ್ಯಂತ ಸುಲಭವಾಗಿ ತೆಗೆದುಕೊಂಡಿದ್ದಲ್ಲ. ಈ ಬಗ್ಗೆ ನಾನು ಸಾಕಷ್ಟು ಆಲೋಚನೆ ಮಾಡಿದ್ದೇನೆ ಎಂದು ಹೇಳಿದ್ದಾರೆ.
29 ವರ್ಷದ ಡಿ ಕಾಕ್ ಅವರ ಪತ್ನಿ ತುಂಬು ಗರ್ಭಿಣಿ. ಆದ್ದರಿಂದ ಭಾರತ ಎದುರಿನ ಎರಡನೇ ಮತ್ತು ಮೂರನೇ ಟೆಸ್ಟ್‌ಗೆ ಅವರು ಲಭ್ಯ ಇರುವುದಿಲ್ಲ ಎಂದು ಈಗಾಗಲೇ ತಿಳಿಸಲಾಗಿತ್ತು. ಎರಡು ಬಾರಿ ದಕ್ಷಿಣ ಆಫ್ರಿಕಾದ ಶ್ರೇಷ್ಠ ಕ್ರಿಕೆಟರ್ ಪ್ರಶಸ್ತಿಗೆ ಭಾಜನರಾಗಿದ್ದರು.
ಈವರೆಗೆ 54 ಟೆಸ್ಟ್ ಪಂದ್ಯಗಳನ್ನು ಆಡಿರುವ ಕ್ವಿನ್‌ಟನ್ 3300 ರನ್‌ಗಳಿಸಿದ್ದಾರೆ. 221 ಕ್ಯಾಚ್ ಪಡೆದುಕೊಂಡಿದ್ದಾರೆ ಮತ್ತು 11 ಸ್ಟಂಪಿಂಗ್ ಮಾಡಿದ್ದಾರೆ.