Politics

ಮೇಕೆ ಮಾಂಸಕ್ಕಾಗಿ ಪಾದಯಾತ್ರೆ- ಆರ್‌ ಅಶೋಕ್‌ ಕಿಡಿ

ಬೆಂಗಳೂರು: ಜನವರಿ ೯ ರಂದು ಕಾಂಗ್ರೆಸ್‌ ಅಂದರೆ ಡಿ.ಕೆ ಶಿವಕುಮಾರ್‌ ನೇತೃತ್ವದಲ್ಲಿ ಮೇಕೆದಾಟು ಅನುಷ್ಠಾನಕ್ಕೆ ಆಗ್ರಹಿಸಿ ಪಾದಯಾತ್ರೆ ಕೈಗೊಳ್ಳಲಾಗಿದೆ. ಈಗಾಗಾಲೇ ಹೇಳಿಕೆ ನೀಡಿರುವ ಡಿ.ಕೆ. ಶಿವಕುಮಾರ್‌ ಪಾದಯಾತ್ರೆ ಮಾಡುತ್ತೇವೆ. ಆದರೆ ಈಗ ವಿರೋಧ ಪಕ್ಷಗಳಿಂದ ಟೀಕಾ-ಪ್ರಹಾರಗಳು ಶುರುವಾಗಿದೆ. ಈ ವಿಚಾರವಾಗಿ ಕಾಂಗ್ರೆಸ್‌ – ಜೆಡಿಎಸ್‌ ನಲ್ಲೆ ಪೈಪೋಟಿ ನಡೆಯುತ್ತಲೇ ಇದೆ. ಇದೀಗ ಪಾದಯಾತ್ರೆ ಕುರಿತು ಕಂದಾಯ ಸಚಿವ ಆರ್‌. ಅಶೋಕ್‌ ಲೇವಡಿ ಮಾಡಿದ್ದಾರೆ. ಅವಾಗ ಕಾಂಗ್ರೆಸ್‌ ಸರ್ಕಾರವಿದ್ದಾಗ ಇದರ ಬಗ್ಗೆ ಮಾತೇ ಇಲ್ಲ. ಇವಾಗ ಮೇಕೆ ಮಾಂಸಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

Share Post