ಕೊರೊನಾ ನಿಯಮಾವಳಿಗೆ ಬೇಸರ:ಬಸ್ಗಳ ಗಾಜು ಪುಡಿ ಪುಡಿ
ದೆಹಲಿ: ದೆಹಲಿಯಲ್ಲಿ ಕೊರೊನಾ ಹೆಚ್ಚಾಗುತ್ತಿರುವುದರಿಂದ ಜನರ ಆರೋಗ್ಯ ದೃಷ್ಟಿಯಿಂದ ಅಲ್ಲಿನ ಅರವಿಂದ್ ಕೇಜ್ರಿವಾಲ್ನ ಆಪ್ ಸರ್ಕಾರ ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದೆ. ಇದರ ವಿರುದ್ಧ ದೆಹಲಿ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ನೈಟ್ ಕರ್ಪ್ಯೂ ವಿಧಿಸಿದ್ದಾರೆ ಜೊತೆಗೆ ರಾಜಧಾನಿಯಲ್ಲಿ ಎಲ್ಲೋ ಅಲರ್ಟ್ ಕೂಡ ಘೋಷಣೆ ಮಾಡಿದ್ದಾರೆ. ಹೊಸ ವರ್ಷಾಚರಣೆಗೆ ಹಲವಾರು ನಿಬಂಧನೆಗಳನ್ನು ಹಾಕಿದ್ದಾರೆ. ಇದರ ಜೊತೆಗೆ 50-50 ರೂಲ್ಸ್ ವಿರುದ್ಧವಾಗಿ ಜನ ಕಿಡಿ ಕಾರಿದ್ದಾರೆ. ಸಾರಿಗೆ ಬಸ್ಗಳಲ್ಲಿ ಕೇವಲ 50ಜನರಿಗೆ ಅವಕಾಶ ನೀಡಿದ್ದಕ್ಕೆ ಸರ್ಕಾರದ ವಿರುದ್ಧ ಜನ ಸಿಡಿದೆದ್ದಿದ್ದಾರೆ. ಐವತ್ತು ಜನಕ್ಕೆ ಅವಕಾಶ ನೀಡಿರುವುದರಿಂದ ಬಸ್ಗಳಲ್ಲಿ ಸೀಟ್ ದೊರೆಯುತ್ತಿಲ್ಲ, ಜೊತೆಗೆ ಬಸ್ಗಾಗಿ ಕಾಯುವ ಪರಿಸ್ಥಿತಿ ಬಂದಿದೆ ಇದರಿಂದ ಕೆಲಸಗಳಿಗೆ ಹೋಗಲು ತೊಂದರೆ ಆಗ್ತಿದೆ ಎಂದು ಗಲಾಟೆ ಮಾಡಿದ್ದಾರೆ.
ದೆಹಲಿ ಟ್ರಾನ್ಸ್ಪೋರ್ಟ್ ಕಾರ್ಪೊರೇಷನ್ ಬಸ್ಗಳ ಮೇಲೆ ಕಲ್ಲು ತೂರಾಟ ನಡೆಸಿ ಬಸ್ಗಳ ಗಾಜು ಪುಡಿ ಪುಡಿ ಮಾಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ದೆಹಲಿ ಪೊಲೀಸರೊಂದಿಗೆ ಜನ ವಾಗ್ವಾದ್ದಕ್ಕಿಳಿದ್ರು. ಪರಿಸ್ಥಿತಿ ಕೈ ಮೀರುವ ಮುನ್ನವೇ ಐವರನ್ನು ಪೊಲೀಸರು ವಶಕ್ಕೆ ಪಡೆದ್ರು.