Districts

ಮತ ಎಣಿಕೆ ಕೇಂದ್ರದಲ್ಲಿ ಬಿಜೆಪಿ-ಕಾಂಗ್ರೆಸ್‌ ಕಾರ್ಯಕರ್ತರ ಮಾರಾಮಾರಿ

ಕೋಲಾರ: ಜಿಲ್ಲೆಯ ಮಾಲೂರಿನಲ್ಲಿ ಪುರಸಭೆ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಫಲಿತಾಂಶ ಹೊರಗೆ ಬೀಳಲಿದೆ. ಮತ ಎಣಿಕೆ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಮಾರಾಮಾರಿಯಾಗಿದೆ. ನಗರದಲ್ಲಿ ಬಿಜೆಪಿ ಸದಸ್ಯರೊಬ್ಬರು ಮತ ಎಣಿಕೆ ಕೇಂದ್ರಕ್ಕೆ ಕಾರಿನಲ್ಲಿ ಬರುತ್ತಿದ್ದಂತೆ ಕಾರ್ಯಕರ್ತರು ಗಲಾಟೆ ಮಾಡಲು ಶುರು ಮಾಡಿದ್ದರು. ಆ ಕಾರಿನಲ್ಲಿ ಸದಸ್ಯರಾದ ಭಾಗ್ಯಮ್ಮ, ಸುಮಿತ್ರಾ ಅವರು ಆಗಮಿಸುತ್ತಿದ್ದ ಹಾಗೇ ಕಾರ್ಯಕರ್ತರು ಕಾರಿಗೆ ಕಲ್ಲು ಹೊಡೆದರು. ಈ ಪರಿಣಾಮ ಕಾರಿನ ಗಾಜು ಪುಡಿ ಪುಡಿಯಾಗಿದೆ. ಈ ವೇಳೆ ಪೊಲೀಸರು ತಕ್ಷಣ ಲಘು ಲಾಠಿ ಪ್ರಹಾರ ಮಾಡಿ, ಪರಿಸ್ಥಿತಿ ತಿಳಿಗೊಳಿಸಿದರು.

Share Post